ಬದರಿನಾಥ ಧಾಮ ದೇಣಿಗೆ ಕಳ್ಳತನ; ದೂರು ದಾಖಲು : Badrinath Dham Theft

ಪ್ರಮೋದ್ ನೌಟಿಯಾಲ್

ಡೆಹರಾಡೂನ್ (ಉತ್ತರಾಖಂಡ) – ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಬದರಿನಾಥ ಧಾಮದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಅಮಾನತುಗೊಂಡಿರುವ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ದೇವಸ್ಥಾನಗಳ ದೇಣಿಗೆ ಕಳ್ಳತನವಾಗುತ್ತಿರುವುದು ದೇವಸ್ಥಾನದ ಇತರ ಪದಾಧಿಕಾರಿಗಳಿಗೆ ಹೇಗೆ ತಿಳಿಯುವುದಿಲ್ಲ? ಒಂದು ವೇಳೆ ತಿಳಿದೂ ಅವರು ಇದನ್ನು ನಿರ್ಲಕ್ಷಿಸುತ್ತಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು! ಮತ್ತು ತಿಳಿಯದಿದ್ದರೆ, ಅಂತಹ ಪದಾಧಿಕಾರಿಗಳನ್ನು ವಜಾಗೊಳಿಸಬೇಕು! – ಸಂಪಾದಕರು)

ದೇವಸ್ಥಾನ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ ಸಿಂಗ್ ರಾಂಗಡ ನೀಡಿದ ಮಾಹಿತಿಯ ಪ್ರಕಾರ, ಈ ಪ್ರಕರಣದ ಸುಳಿವು ಸಿಗುತ್ತಲೇ ಜುಲೈ 3 ರಂದೇ ನೌಟಿಯಾಲ್ ಅವರಿಗೆ ‘ಕಾರಣ ಕೇಳಿ’ ನೋಟಿಸ್ ಜಾರಿ ಮಾಡಲಾಗಿತ್ತು; ಆದರೆ ಅವರು ನೋಟಿಸ್‌ ಗೆ ನೀಡಿದ ಉತ್ತರವು ಅತ್ಯಂತ ಸಂದೇಹಾಸ್ಪದವಾಗಿ ಕಂಡುಬಂದಿದ್ದರಿಂದ, ಸಮಿತಿಯು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ. ದೇವಸ್ಥಾನ ಸಮಿತಿಯು ಈಗ ಈ ಪ್ರಕರಣದ ಮೂಲಕ್ಕೆ ಹೋಗಿ ಇದರಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ?, ಎಂಬುದರ ಕುರಿತು ತನಿಖೆ ನಡೆಸುತ್ತಿದೆ.

ಸಂಪಾದಕೀಯ ನಿಲುವು

  • ದೇವಸ್ಥಾನಗಳ ಹಣದ ಕಳ್ಳತನ ದೇವಸ್ಥಾನದ ಜನರಿಂದಲೇ ಆಗುವುದು ಹಿಂದೂಗಳಿಗೆ ಅತ್ಯಂತ ಲಜ್ಜಾಸ್ಪದ ಸಂಗತಿ!
  • ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಮತ್ತು ಅವರು ಧರ್ಮಾಚರಣೆ ಮಾಡದಿದ್ದರಿಂದ ಅವರಿಗೆ ಧರ್ಮದ ಬಗ್ಗೆ ಜ್ಞಾನ ಹಾಗೂ ಅಭಿಮಾನ ಇಲ್ಲದಿರುವುದರಿಂದಲೇ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಧರ್ಮಾಚರಣೆ ಮಾಡುವ ಆಡಳಿತಗಾರರಿರುವ ಹಿಂದೂ ರಾಷ್ಟ್ರವೇ ಬೇಕು!