​ಮಂದಿರ ಸಮಿತಿಯ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲ್ ಅಮಾನತು : Badrinath Temple Donation Theft

  • ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನದ ಪ್ರಕರಣ

  • ಮಂದಿರ ಸಮಿತಿಯು ರಚಿಸಿದ ತನಿಖಾ ತಂಡಕ್ಕೆ ದೇಣಿಗೆ ಕಳ್ಳತನವಾಗಿರುವುದಕ್ಕೆ ಸಿಕ್ಕದೆ ಪುರಾವೆ !

ಪ್ರಮೋದ್ ನೌಟಿಯಾಲ್

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಪ್ರಸಿದ್ಧ ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನದ ಆರೋಪದ ಪ್ರಕರಣದಲ್ಲಿ, ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲರವರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಉತ್ತರಾಖಂಡ ಸರಕಾರವೂ ಗಢವಾಲ ಆಯುಕ್ತರ ಅಧ್ಯಕ್ಷತೆಯಲ್ಲಿ 3 ಸದಸ್ಯರ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ.

. ಬದರಿನಾಥ ಧಾಮದಲ್ಲಿ ದೇಣಿಗೆಯ ಹಣವನ್ನು ಎಣಿಸುವಾಗ ಅಕ್ರಮ ನಡೆದಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳು ಶುರುವಾದ ನಂತರ, ‘ಭೈರವ ಸೇನಾ’ ಎಂಬ ಸಂಘಟನೆಯು ಪೊಲೀಸರಿಗೆ ದೂರು ನೀಡಿ, ಪ್ರಕರಣದ ತನಿಖೆ ನಡೆಸಿ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿತ್ತು.

. ಈ ಆರೋಪಗಳ ನಂತರ ಮಂದಿರ ಸಮಿತಿಯು 4 ಸದಸ್ಯರ ತನಿಖಾ ತಂಡವನ್ನು ರಚಿಸಿತು. ತನಿಖಾ ತಂಡವು ಸಿಸಿಟಿವಿ ದೃಶ್ಯಾವಳಿಗಳು, ನೌಕರರ ಹೇಳಿಕೆಗಳು ಮತ್ತು ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಿದೆ.

. ಈ ತಂಡದ ಪ್ರಾಥಮಿಕ ತನಿಖೆಯಲ್ಲಿ ದೇಣಿಗೆ ಕಳ್ಳತನದ ಆರೋಪಗಳು ನಿಜವೆಂದು ಕಂಡುಬಂದಿದೆ. ಇದರ ಬೆನ್ನಲ್ಲೇ ಮಂದಿರ ಸಮಿತಿಯ ಅಧ್ಯಕ್ಷರಾದ ಹೇಮಂತ ದ್ವಿವೇದಿಯವರು ಖಾಸಗಿ ಕಾರ್ಯದರ್ಶಿಯಾದ ಪ್ರಮೋದ ನೌಟಿಯಾಲ ರವರನ್ನು ಅಮಾನತುಗೊಳಿಸಿದ್ದಾರೆ. ಅನುಮತಿಯಿಲ್ಲದೆ ಸಮಿತಿಯ ಪ್ರಧಾನ ಕಚೇರಿಯನ್ನು ಬಿಟ್ಟು ಹೋಗದಂತೆ ಅವರಿಗೆ ಆದೇಶಿಸಲಾಗಿದೆ.

. ಈ ಕಳ್ಳತನದ ಸಂದರ್ಭದಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಧೀರಜ ಸಿಂಗ್ ಗರ್ಬ್ಯಾಲ್ ಅವರ ಆದೇಶದ ಮೇರೆಗೆ 3 ಸದಸ್ಯರ ಸರಕಾರಿ ಸಮಿತಿಯನ್ನು ರಚಿಸಲಾಗಿದ್ದು, ಅದರ ಅಧ್ಯಕ್ಷತೆಯನ್ನು ಗಢವಾಲ ಆಯುಕ್ತರು ವಹಿಸಲಿದ್ದಾರೆ. ಈ ಸಮಿತಿಯು 15 ದಿನಗಳ ಒಳಗಾಗಿ ತನಿಖಾ ವರದಿ ಮತ್ತು ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ.

. ಭ್ರಷ್ಟಾಚಾರದ ವಿಷಯದಲ್ಲಿ ತಮ್ಮ ನಿಲುವು ‘ಶೂನ್ಯ ಸಹನೆ’ಯದ್ದಾಗಿದ್ದು , ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂದಿರ ಸಮಿತಿಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಮಂದಿರದ ದೇಣಿಗೆಗಳ ಕಳ್ಳತನದ ಪ್ರಕರಣಗಳು ಮುನ್ನೆಲೆಗೆ ಬರುತ್ತಿರುವುದರಿಂದ, ಈಗ ದೇಶದ ಸರಕಾರೀಕರಣಗೊಂಡ ಎಲ್ಲಾ ದೇವಸ್ಥಾನಗಳು ಮತ್ತು ಇತರ ದೇವಸ್ಥಾನಗಳನ್ನು ಕೇವಲ ಮತ್ತು ಕೇವಲ ಭಕ್ತರ ನಿಯಂತ್ರಣಕ್ಕೇ ತರುವುದನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ! ಸರಕಾರದಿಂದ ಈ ಕಾರ್ಯವಾಗದ ಕಾರಣ ಹಿಂದೂಗಳು ಇದಕ್ಕಾಗಿ ಒತ್ತಡ ಹೇರುವುದು ಅತ್ಯಗತ್ಯವಾಗಿದೆ!