ಖಾತೆಗಳಲ್ಲಿ ೪೪೦ ಕೋಟಿ ರೂಪಾಯಿ ಠೇವಣಿ !

ಕೋಲಕಾತಾ (ಬಂಗಾಳ) – ಜಾರಿ ನಿರ್ದೇಶನಾಲಯವು (‘ಇಡಿ’) ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ಕೋಲಕಾತಾದ ೩ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಖಾತೆಗಳಲ್ಲಿ ಒಟ್ಟು ೪೪೦ ಕೋಟಿ ರೂಪಾಯಿಗಳು ಜಮೆಯಾಗಿವೆ. ತೃಣಮೂಲ ಕಾಂಗ್ರೆಸ್‌ನ ಬಂಡಾಯ ಶಾಸಕರ ಗುಂಪೊಂದು ನೀಡಿದ ದೂರಿನ ಮೇರೆಗೆ, ಪೊಲೀಸರು ಈ ಖಾತೆಗಳಿಂದ ನಡೆಯುವ ಎಲ್ಲಾ ವಹಿವಾಟುಗಳು ಮತ್ತು ಹಣ ಹಿಂಪಡೆಯುವುದನ್ನು ನಿಷೇಧಿಸಿದ್ದರು. ಈ ಬಂಡಾಯ ಗುಂಪಿನ ನೇತೃತ್ವವನ್ನು ಋತಬ್ರತ್ ಬ್ಯಾನರ್ಜಿ ವಹಿಸಿಕೊಂಡಿದ್ದಾರೆ. ಈಗ ಇಡಿ ಈ ಪ್ರಕರಣವನ್ನು ತನ್ನ ವಶಕ್ಕೆ ತೆಗೆದುಕೊಂಡು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.
The Enforcement Directorate (ED) has frozen three HDFC Bank accounts linked to the Trinamool Congress (TMC), holding deposits worth ₹440.42 crore.
The action was taken under the Prevention of Money Laundering Act (PMLA) as part of an ongoing money laundering probe into the… pic.twitter.com/hlJnRZXVxA
— Sanatan Prabhat (@SanatanPrabhat) July 8, 2026
ಇಡಿಯ ಪ್ರಾಥಮಿಕ ತನಿಖೆಯ ಪ್ರಕಾರ, ೧೫೦ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಅನುಮಾನಾಸ್ಪದ ಹಣವನ್ನು ವಿಮಾನಯಾನ ಮತ್ತು ಪ್ರವಾಸ ಸಂಸ್ಥೆಗಳ ಮೂಲಕ ಕಳುಹಿಸಲಾಗಿತ್ತು. ಈ ಬ್ಯಾಂಕ್ ಖಾತೆಗಳನ್ನು ಭ್ರಷ್ಟಾಚಾರ, ಸುಲಿಗೆ ಅಥವಾ ಸ್ಥಳೀಯ ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನು ಅಡಗಿಸಿಡಲು ಬಳಸಲಾಗಿದೆಯೇ?, ಎಂಬ ಬಗ್ಗೆ ತನಿಖಾ ಸಂಸ್ಥೆಯು ಅತ್ಯಂತ ಆಳವಾಗಿ ತನಿಖೆ ನಡೆಸುತ್ತಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ