ಪ.ಪೂ. ಗೋವಿಂದ ದೇವಗಿರಿ ಮಹಾರಾಜರು ಟ್ರಸ್ಟ್‌ನ ಸಭೆಯ ನಂತರ ಮಾಹಿತಿ ನೀಡಿದರು
ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆ ಅಂಗೀಕಾರ!
ಕೃಷ್ಣ ಮೋಹನ್ ಅವರಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ತಾತ್ಕಾಲಿಕ ಜವಾಬ್ದಾರಿ
3 ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯು ಹೊಸ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಿದೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದಲ್ಲಿ ನಡೆದ ದಾನದ ಕಳ್ಳತನದ ಪ್ರಕರಣದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸಭೆಯನ್ನು ಜುಲೈ 6 ರಂದು ಮಂದಿರದ ಆವರಣದಲ್ಲಿ ಆಯೋಜಿಸಲಾಗಿತ್ತು. ಸಭೆಗೆ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯಗೋಪಾಲ ದಾಸ್, ಖಜಾಂಜಿ ಪ.ಪೂ. ಗೋವಿಂದ ದೇವಗಿರಿ ಮಹಾರಾಜರು, ಸದಸ್ಯರು ಮತ್ತು ಅಯೋಧ್ಯೆಯ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಭೆಯ ನಂತರ ಪ.ಪೂ. ಗೋವಿಂದ ದೇವಗಿರಿ ಅವರು ಪತ್ರಿಕಾಗೋಷ್ಠಿ ನಡೆಸಿ ಸಭೆಯಲ್ಲಿ ನಡೆದ ಚರ್ಚೆ ಮತ್ತು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಕಳ್ಳತನದ ಪ್ರಕರಣದಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಅನಿಲ್ ಮಿಶ್ರಾ ಅವರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ, ಹಾಗೆಯೇ ಚಂಪತ್ ರಾಯ್ ಅವರ ಜಾಗದಲ್ಲಿ ಸದಸ್ಯ ಕೃಷ್ಣಮೋಹನ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ತಾತ್ಕಾಲಿಕ ಜವಾಬ್ದಾರಿಯನ್ನು ನೀಡಲಾಗಿದೆ. 3 ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಲಾಗಿದ್ದು, ಅವರ ಮೂಲಕ ಹೊಸ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುವುದು. ಅಲ್ಲದೆ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಪ.ಪೂ. ಗೋವಿಂದ ದೇವಗಿರಿ ಅವರು ಮಾಹಿತಿ ನೀಡಿದರು. ಕಳ್ಳತನದ ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿಶೇಷ ತನಿಖಾ ತಂಡದ ವರದಿ ಬಂದ ನಂತರ ಜುಲೈ 22 ರಂದು ಟ್ರಸ್ಟ್‌ನ ಮುಂದಿನ ಸಭೆಯನ್ನು ಆಯೋಜಿಸಲಾಗಿದೆ.
ಕಳ್ಳತನದ ಪ್ರಕರಣದಲ್ಲಿ ಯಾರೂ ಸುಳ್ಳು ಸುದ್ದಿಗಳನ್ನು ಹರಡಬಾರದು! – ಪ.ಪೂ. ಗೋವಿಂದ ದೇವಗಿರಿ ಅವರ ಜನತೆಗೆ ಕರೆ
ದಾನದ ಕಳ್ಳತನದ ಪ್ರಕರಣದಲ್ಲಿ ಮಂದಿರಕ್ಕೆ ಅರ್ಪಿಸಲಾದ ಕೆಲವು ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳು ಕಳ್ಳತನವಾಗಿವೆ ಅಥವಾ ನಾಪತ್ತೆಯಾಗಿವೆ ಎಂದು ಆರೋಪಿಸಲಾಗುತ್ತಿತ್ತು. ಈ ಪತ್ರಿಕಾಗೋಷ್ಠಿಯ ಸ್ಥಳದಲ್ಲೇ ಆರೋಪಿಸಲಾದ ಎಲ್ಲಾ ವಸ್ತುಗಳನ್ನು ಪತ್ರಕರ್ತರಿಗೆ ನೇರವಾಗಿ ತೋರಿಸಲಾಯಿತು. ಆದ್ದರಿಂದ ಈ ವಸ್ತುಗಳು ಕಳ್ಳತನವಾಗಿಲ್ಲ ಮತ್ತು ಅವುಗಳು ಟ್ರಸ್ಟ್‌ನಲ್ಲಿ ನೋಂದಣಿಯಾಗಿವೆ ಎಂದು ಪ.ಪೂ. ಗೋವಿಂದ ದೇವಗಿರಿ ಅವರು ಸ್ಪಷ್ಟಪಡಿಸಿದರು. ಇಂತಹ 2,800 ಕ್ಕೂ ಹೆಚ್ಚು ವಸ್ತುಗಳು ಟ್ರಸ್ಟ್‌ನಲ್ಲಿ ನೋಂದಣಿಯಾಗಿವೆ ಎಂದು ಸ್ಪಷ್ಟಪಡಿಸುತ್ತಾ, ಈ ವಿಷಯದಲ್ಲಿ ಯಾರೂ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಅವರು ಮನವಿ ಮಾಡಿದರು. ಈ ಸಮಯದಲ್ಲಿ ಅವರು ಮಾಧ್ಯಮಗಳ ಮೇಲೆ ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಿದ ಬಗ್ಗೆ ಟೀಕಿಸಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ