ಇಟಾವಾ (ಉತ್ತರ ಪ್ರದೇಶ): ಅಪ್ರಾಪ್ತ ಹಿಂದೂ ಹುಡುಗಿಯನ್ನು ಕತಾರ್‌ ಗೆ ಕರೆದೊಯ್ದು ಮತಾಂತರಕ್ಕೆ ಯತ್ನ

​೫ ಮುಸಲ್ಮಾನರು ಪೊಲೀಸ್ ವಶಕ್ಕೆ

ಇಟಾವಾ (ಉತ್ತರ ಪ್ರದೇಶ) – ಇಲ್ಲಿ ೧೩ ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂತರ ಮಾಡಲು ಕತಾರ್‌ ಗೆ ಕರೆದೊಯ್ಯುವ ಸಂಚು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ೫ ಜನರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ.
​ಸಂತ್ರಸ್ತ ಹುಡುಗಿಯ ತಂದೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತಮ್ಮ ಮಗಳು ನೃತ್ಯ ಕಲಿಯಲು ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ

ಆಕೆಗೆ ಒಬ್ಬ ಮುಸ್ಲಿಂ ಮಹಿಳೆಯ ಪರಿಚಯವಾಗಿತ್ತು. ಅದೇ ಮಹಿಳೆಯ ಮುಖಾಂತರ ಕೆಲವು ಮುಸ್ಲಿಂ ಯುವಕರು ಹುಡುಗಿಯ ಸಂಪರ್ಕಕ್ಕೆ ಬಂದರು ಮತ್ತು ಮತಾಂತರಗೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಹುಡುಗಿಯನ್ನು ದೋಹಾ (ಕತಾರ್) ಕ್ಕೆ ಕರೆದೊಯ್ದ ಬಳಿಕ ಮತಾಂತರಗೊಳ್ಳುವ ಸಂದೇಶವನ್ನು ಆಕೆಯ ಮೊಬೈಲ್‌ ಗೆ ಕಳುಹಿಸಲಾಗಿತ್ತು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣ ಸಿಕ್ಕರೆ ಅವರಲ್ಲಿ ಧರ್ಮಾಭಿಮಾನ ನಿರ್ಮಾಣವಾಗುತ್ತದೆ, ಅವರು ಧರ್ಮಾಚರಣೆ ಮಾಡಲು ಪ್ರಾರಂಭಿಸುತ್ತಾರೆ ಮತ್ತು ಇಂತಹ ಷಡ್ಯಂತ್ರಗಳಿಗೆ ಬಲಿಯಾಗುವುದಿಲ್ಲ!