
ಇಸ್ಲಾಮಾಬಾದ (ಪಾಕಿಸ್ತಾನ) – ಲಾಹೋರ್ ನಲ್ಲಿ ಇಬ್ಬರು ವಿದೇಶಿ ಮಹಿಳೆಯರನ್ನು ಅಪಹರಿಸಿ ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ದೇಶದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ಡಾರ್ ಅವರ ನಿಕಟ ಸಂಬಂಧಿ ಸೇರಿದಂತೆ ೪ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಪಾಕಿಸ್ತಾನದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ನೆದರಲ್ಯಾಂಡ್ಸ್ ಮತ್ತು ಇನ್ನೊಬ್ಬರು ವೆನೆಜುವೆಲಾದ ನಾಗರಿಕರಾಗಿದ್ದಾರೆ. ಜೂನ್ ೨೯ ರಂದು ಈ ಇಬ್ಬರೂ ಮಹಿಳೆಯರು ಲಾಹೋರ್ ಗೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಆರೋಪಿಗಳು ಅವರನ್ನು ಅಪಹರಿಸಿ ಮನೆಯೊಂದಕ್ಕೆ ಕರೆದೊಯ್ದು ಅವರ ಮೇಲೆ ಬಲಾತ್ಕಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆಯರನ್ನು ಬಿಡುಗಡೆ ಮಾಡಲು ಆರೋಪಿಗಳು ಹಣದ ಬೇಡಿಕೆಯನ್ನೂ ಇಟ್ಟಿದ್ದರು. ಸಂತ್ರಸ್ತ ಮಹಿಳೆಯೊಬ್ಬರ ತಂದೆ ನೇರವಾಗಿ ಸ್ಪೇನ್ ನಿಂದ ಪಾಕಿಸ್ತಾನ ಪೊಲೀಸರಿಗೆ ದೂರವಾಣಿ ಕರೆ ಮಾಡಿ ‘ನನ್ನ ಮಗಳು ಸಂಕಟದಲ್ಲಿದ್ದಾಳೆ’ ಎಂದು ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ತಕ್ಷಣವೇ ತನಿಖೆಯನ್ನು ಚುರುಕುಗೊಳಿಸಿ ಇಬ್ಬರೂ ವಿದೇಶಿ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಈ ಇಬ್ಬರೂ ವಿದೇಶಿ ಮಹಿಳೆಯರು ಮತ್ತು ಮುಖ್ಯ ಆರೋಪಿ ಮಹಮ್ಮದ ರಜಾ ಡಾರ್ ಅಕ್ಟೋಬರ್ ೨೦೨೫ ರಲ್ಲಿ ಸಿಂಗಾಪುರದಲ್ಲಿ ಭೇಟಿಯಾಗಿದ್ದರು. ಇವರು ಮೂವರೂ ಒಂದೇ ವ್ಯವಸಾಯಕ್ಕೆ ಸಂಬಂಧ ಹೊಂದಿದ್ದರು. ರಜಾ ಡಾರ್ ಅವರೇ ಈ ಮಹಿಳೆಯರನ್ನು ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದ್ದರು; ಆದರೆ ನಂಬಿಕೆಯಿಂದ ಪಾಕಿಸ್ತಾನಕ್ಕೆ ಬಂದ ಈ ಮಹಿಳೆಯರು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನರಕಯಾತನೆಯನ್ನು ಅನುಭವಿಸಬೇಕಾಯಿತು.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim