ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೧೦,೦೦೦ ಜನರ ಬಂಧನ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೧೦,೦೦೦ ಜನರನ್ನು ಅಮೆರಿಕದ ‘ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್’ ಇಲಾಖೆಯು ಜೂನ್ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಬಂಧಿಸಿದೆ. ಅಮೆರಿಕದ ಪ್ರಮುಖ ನಗರಗಳಲ್ಲಿ ಹೆಚ್ಚು ಸದ್ದು ಮಾಡಿ ದಾಳಿ ನಡೆಸುವ ಬದಲಿಗೆ, ಈ ಇಲಾಖೆಯು ಈಗ ಹೆಚ್ಚು ರಹಸ್ಯ ಮತ್ತು ಯೋಜಿತ ರೀತಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಆದಾಗ್ಯೂ, ಈ ಬಂಧನಗಳು ನಿಖರವಾಗಿ ಯಾವ ಯಾವ ಭಾಗಗಳಲ್ಲಿ ನಡೆದಿವೆ? ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಸಂಪಾದಕೀಯ ನಿಲುವು

ಅನೇಕ ವರ್ಷಗಳಾದರೂ ಭಾರತದಲ್ಲಿ ಇಷ್ಟೊಂದು ಸಂಖ್ಯೆಯ ಅಕ್ರಮ ವಲಸಿಗರನ್ನು ಹಿಡಿಯುವುದಿಲ್ಲ; ಆದರೆ ಅಮೆರಿಕ ಕೆಲವೇ ದಿನಗಳಲ್ಲಿ ಇಂತವರನ್ನು ಹಿಡಿಯುತ್ತದೆ. ಇದರಿಂದ ಭಾರತ ಎಷ್ಟು ‘ಹಿಂದುಳಿದಿದೆ’ ಮತ್ತು ಯಾಕೆ ‘ಧರ್ಮಶಾಲೆ’ಯಾಗಿದೆ ಎಂಬುದು ತಿಳಿಯುತ್ತದೆ!