೩ ಕೋಟಿ ರೂಪಾಯಿ ಲಂಚದ ಪ್ರಕರಣದಲ್ಲಿ ಐ.ಪಿ.ಎಸ್. ಅಧಿಕಾರಿಯ ಬಂಧನ

ನಕಲಿ ಔಷಧ ತಯಾರಿಕೆ ಪ್ರಕರಣದಲ್ಲಿ ಆರೋಪಿಗೆ ನೆರವು ನೀಡುವ ಭರವಸೆ

ದೀಪಕ್ ಗಹ್ಲಾವತ್

ನವದೆಹಲಿ – ಕೇಂದ್ರೀಯ ತನಿಖಾ ದಳವು (ಸಿಬಿಐ) ಭಾರತೀಯ ‍ಪೊಲೀಸ್ ಸೇವೆಯ (ಐ.ಪಿ.ಎಸ್.) ಅಧಿಕಾರಿ ದೀಪಕ ಗಹ್ಲಾವತ್ ಅವರನ್ನು ನಕಲಿ ಔಷಧ ತಯಾರಿಕೆ ಪ್ರಕರಣವೊಂದರಲ್ಲಿ ಲಂಚ ಕೇಳಿದ ಆರೋಪದ ಮೇಲೆ ಬಂಧಿಸಿದೆ. ಅವರು ಪುದುಚೇರಿಯಲ್ಲಿ ನಡೆಯುತ್ತಿರುವ ನಕಲಿ ಔಷಧ ತಯಾರಿಕೆ ಪ್ರಕರಣದ ಸಿಬಿಐ ತನಿಖೆಯಲ್ಲಿ ರಕ್ಷಣೆ ನೀಡುವುದಾಗಿ ಭರವಸೆ ನೀಡಿ, ಉದ್ಯಮಿಯೊಬ್ಬರಿಂದ ೩ ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ದೀಪಕ ಗಹ್ಲಾವತ್ ಅವರು ಆ ಸಮಯದಲ್ಲಿ ಕೇಂದ್ರದ ನಿಯೋಜನೆಯ ಮೇರೆಗೆ ‘ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ’ಯಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಈ ಪ್ರಕರಣದಲ್ಲಿ ಪ್ರದೀಪ ಸಿಂಗ್, ರಾಜಕುಮಾರ್ ಸೇರಿದಂತೆ ಒಟ್ಟು ೭ ಜನರನ್ನು ಬಂಧಿಸಲಾಗಿತ್ತು. ಸಿಬಿಐ ೨೫ ಲಕ್ಷ ರೂಪಾಯಿ ಲಂಚದ ಹಣ, ೯೦ ಲಕ್ಷ ರೂಪಾಯಿ ನಗದು, ಹಲವು ದಾಖಲೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಂಡಿದೆ.

ಸಂಪಾದಕೀಯ ನಿಲುವು

ನಕಲಿ ಔಷಧಗಳಿಂದಾಗಿ ಅನೇಕ ರೋಗಿಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ಮುನ್ನೆಲೆಗೆ ಬಂದಿವೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ರಕ್ಷಿಸುವ ಪೊಲೀಸ್ ಅಧಿಕಾರಿಗಳ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು!