‘ಅಗ್ನಿ-೬’ ಕ್ಷಿಪಣಿಯು ಬರೋಬ್ಬರಿ ೮ ಸಾವಿರದಿಂದ ೧೨ ಸಾವಿರ ಕಿ.ಮೀ.ವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಬಾಲಾಸೋರ್ (ಒಡಿಶಾ) – ಚಾಂದಿಪುರದ ‘ಇಂಟಿಗ್ರೇಟೆಡ್ ಟೆಸ್ಟ್ ರೇಂಜ್’ನಲ್ಲಿ ನಡೆಯಲಿರುವ ‘ಅಗ್ನಿ-೬’ ಕ್ಷಿಪಣಿಯ ಸಂಭಾವ್ಯ ಪರೀಕ್ಷೆಯ ಮುನ್ನ, ಸುರಕ್ಷತೆಯ ಕಾರಣಗಳಿಗಾಗಿ ಪರೀಕ್ಷಾ ಸ್ಥಳದಿಂದ ೧ ರಿಂದ ೩.೫ ಕಿ.ಮೀ. ವ್ಯಾಪ್ತಿಯಲ್ಲಿದ್ದ ಸುಮಾರು ೧೧ ಸಾವಿರದ ೪೪೨ ನಾಗರಿಕರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಅವರಿಗೆ ವಿವಿಧ ಆಶ್ರಯ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಡಳಿತ ಮಂಡಳಿಯು ಪರೀಕ್ಷಾ ಸ್ಥಳದ ಸಂಪೂರ್ಣ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದೆ. ಪರೀಕ್ಷೆ ಮುಗಿದ ನಂತರ ಮತ್ತು ಸುರಕ್ಷತಾ ಅನುಮತಿ ಸಿಕ್ಕ ಬಳಿಕ ನಾಗರಿಕರಿಗೆ ಮರಳಲು ಅನುಮತಿ ನೀಡಲಾಗುವುದು. ‘ಅಗ್ನಿ-೬’ ಪರೀಕ್ಷೆಯ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ‘ಫರ್ಸ್ಟ್ ಪೋಸ್ಟ್’ ಸುದ್ದಿ ಜಾಲತಾಣವು ಈ ಸುದ್ದಿಯನ್ನು ಪ್ರಸಾರ ಮಾಡಿದೆ. ಈ ಕ್ಷಿಪಣಿಯು ೮ ಸಾವಿರದಿಂದ ೧೨ ಸಾವಿರ ಕಿ.ಮೀ. ದೂರದವರೆಗೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”