ಬಂಗಾಳದಲ್ಲಿ ಗಡಿಗೆ ಬೇಲಿ ಹಾಕಲು ಗಡಿ ಭದ್ರತಾ ಪಡೆ ಬಂದಾಗ ಸಿಹಿ ಹಂಚಿದ ಗ್ರಾಮಸ್ಥರು !

ಕೋಲಕಾತಾ (ಬಂಗಾಳ) – ಬಂಗಾಳ ಗಡಿಯ 600 ಕಿಲೋಮೀಟರ್ ನ ಒಂದು ಭಾಗವು ಬಾಂಗ್ಲಾದೇಶದೊಂದಿಗಿನ ಗಡಿಯನ್ನು ಸಂಪೂರ್ಣವಾಗಿ ಮುಕ್ತವಾಗಿಟ್ಟಿದೆ. ಅಲ್ಲಿ ಯಾವುದೇ ಬೇಲಿ ಇಲ್ಲ. ಕೆಲವು ದಿನಗಳ ಹಿಂದೆ ಮುರ್ಷಿದಾಬಾದ ಜಿಲ್ಲೆಯ ಜಲಂಗಿ ಮಾರುಕಟ್ಟೆಯ ಶೂನ್ಯ ರೇಖೆಯಲ್ಲಿರುವ ಸಕಾರಪಾಡಾ ಗ್ರಾಮಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ತಂಡವು ಗಡಿ ಅಳತೆ ಮಾಡಲು ಬಂದಾಗ ಗ್ರಾಮಸ್ಥರು ಸಿಹಿ ಹಂಚಿದ್ದರು.

1. ಈ ಗ್ರಾಮದ ಜನಸಂಖ್ಯೆ 4 ಸಾವಿರದಷ್ಟಿದ್ದು, 2 ಸಾವಿರ 500 ಮತದಾರರಿದ್ದಾರೆ. ಇವರಲ್ಲಿ ಶೇಕಡಾ 95 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಗ್ರಾಮದ ಭೌಗೋಳಿಕ ಪರಿಸ್ಥಿತಿಯು ಅತ್ಯಂತ ಸೂಕ್ಷ್ಮವಾಗಿದೆ. ಮನೆಗಳು ಮುಗಿದ ತಕ್ಷಣ ಜನರ ಹೊಲಗಳು ಆರಂಭವಾಗುತ್ತವೆ ಮತ್ತು ಹೊಲ ಮುಗಿಯುತ್ತಿದ್ದಂತೆ ಬಾಂಗ್ಲಾದೇಶ ಆರಂಭವಾಗುತ್ತದೆ.

2. ಸ್ಥಳೀಯ ನಿವಾಸಿಯಾದ ಪಿಂಟು ಮಂಡಲರವರು ಮಾತನಾಡಿ, ನಮಗೆ ಸಂಜೆ 5 ಗಂಟೆಯ ನಂತರ ನಮ್ಮ ಹೊಲಗಳಿಗೆ ಹೋಗಲು ಅನುಮತಿಯಿಲ್ಲ; ಆದರೆ ಬಾಂಗ್ಲಾದೇಶದ ಜನರು ಯಾವಾಗ ಬೇಕಾದರೂ ನಮ್ಮ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಕಟಾವು ಮಾಡಿಕೊಂಡು ಹೋಗುತ್ತಾರೆ. ಕಳೆದ 30 ವರ್ಷಗಳಲ್ಲಿ ಅವರೊಂದಿಗೆ ವಿವಾದ ನಡೆಯದ ಒಂದು ತಿಂಗಳೂ ಕಳೆದಿಲ್ಲ; ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ; ಏಕೆಂದರೆ ಗಡಿ ಭದ್ರತಾ ಪಡೆಯು ಬೇಲಿ ಹಾಕಲು ಪ್ರಾರಂಭಿಸಿದೆ. ಹೀಗಾಗಿ ನಾವು ರಾತ್ರಿ ಬೆಳೆಯನ್ನು ಹೇಗೆ ಬಿಟ್ಟು ಹೋಗುತ್ತೇವೆಯೋ, ಮುಂಜಾನೆ ಅದು ಅದೇ ರೀತಿ ಸಿಗುತ್ತದೆ ಎಂಬ ಭರವಸೆ ನಮಗಿದೆ ಎಂದರು.

ಬಂಗಾಳದ 2 ಸಾವಿರ 216 ಕಿ.ಮೀ. ಗಡಿಯು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿದೆ

ಭಾರತ ಮತ್ತು ಬಾಂಗ್ಲಾದೇಶದ ನಡುವೆ 4 ಸಾವಿರ 97 ಕಿಲೋಮೀಟರ್ ಉದ್ದದ ಗಡಿಯಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಅಂದಾಜು 3 ಸಾವಿರದ 240 ಕಿಲೋಮೀಟರ್ ಗಡಿಗೆ ಬೇಲಿ ಹಾಕಲಾಗಿದ್ದು, ಅದರಲ್ಲಿ 175 ಕಿಲೋಮೀಟರ್ ಕಠಿಣ ಭೂಪ್ರದೇಶ ಸೇರಿದಂತೆ ಸುಮಾರು 850 ಕಿಲೋಮೀಟರ್ ಗಡಿಗೆ ಬೇಲಿ ಹಾಕುವುದು ಬಾಕಿ ಉಳಿದಿದೆ.