ಕಾಯ್ದಿರಿಸಿದ ಟಿಕೆಟ್ ಇದ್ದರೂ 4 ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಬೇಕಾದ ಪ್ರಕರಣ
ಪ್ರಯಾಣಿಕರ ಸೀಟುಗಳಲ್ಲಿ ಬಂದು ಕುಳಿತಿದ್ದ ರೈಲ್ವೆ ಸಿಬ್ಬಂದಿ!

ಪಾಟಲಿಪುತ್ರ (ಬಿಹಾರ) – ಕಾಯ್ದಿರಿಸಿದ ಟಿಕೆಟ್ ಇದ್ದರೂ ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸಬೇಕಾಗಿ ಬಂದಿದ್ದಕ್ಕಾಗಿ, ಸಂತ್ರಸ್ತ ಪ್ರಯಾಣಿಕರಿಗೆ 20 ಸಾವಿರ ರೂಪಾಯಿ ಹಾನಿಪರಿಹಾರ ನೀಡುವಂತೆ ರಾಜ್ಯದ ‘ಭೋಜಪುರ ಜಿಲ್ಲಾ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗ’ವು ರೈಲ್ವೆ ಇಲಾಖೆಗೆ ಆದೇಶಿಸಿದೆ.
೧. ‘ಎಲ್.ಟಿ.ಟಿ ಪಾಟ್ನಾ ಎಕ್ಸ್ ಪ್ರೆಸ್’ ರೈಲಿನಲ್ಲಿ ನಾಲ್ವರು ಪ್ರಯಾಣಿಕರು ವಿಂಧ್ಯಾಂಚಲದಿಂದ ಅರಾ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಪ್ರಯಾಣಕ್ಕೂ ಮುನ್ನವೇ ಅವರು ಟಿಕೆಟ್ ಕಾಯ್ದಿರಿಸಿದ್ದರು. ‘ಬಿ-4’ ಬೋಗಿಯಲ್ಲಿ ಅವರ ಸೀಟುಗಳು ಕಾಯ್ದಿರಿಸಲ್ಪಟ್ಟಿದ್ದವು; ಆದರೆ ಅಲ್ಲಿ ಅದಾಗಲೇ ಬೇರೆ ಯಾರೋ ಬಂದು ಕುಳಿತಿದ್ದರು. ಪ್ರಯಾಣಿಕರು ವಿಚಾರಿಸಿದಾಗ, ಅಲ್ಲಿ ಕುಳಿತಿದ್ದವರು ರೈಲ್ವೆ ಇಲಾಖೆಯ ಸರಕಾರಿ ನೌಕರರೆಂಬುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಆ ಸಿಬ್ಬಂದಿಗಳು ಸೀಟಿನಿಂದ ಏಳಲು ಸ್ಪಷ್ಟವಾಗಿ ನಿರಾಕರಿಸಿದರು.
೨. ತೊಂದರೆಗೊಳಗಾದ ಪ್ರಯಾಣಿಕರು ತಕ್ಷಣವೇ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿ ಸಹಾಯ ಕೋರಿದರು; ಆದರೆ ಅವರಿಗೆ ಯಾವುದೇ ಸಹಾಯ ಸಿಗಲಿಲ್ಲ. ಇದರಿಂದಾಗಿ ನಾಲ್ಕೂ ಜನ ಪ್ರಯಾಣಿಕರು ಇಡೀ ದಾರಿಯುದ್ದಕ್ಕೂ ನಿಂತುಕೊಂಡೇ ಪ್ರಯಾಣಿಸಬೇಕಾಯಿತು. ತದನಂತರ ಈ ಪ್ರಯಾಣಿಕರು ರೈಲ್ವೆ ಸೇವೆ ಮತ್ತು ರೈಲ್ವೆ ಸಚಿವಾಲಯಕ್ಕೂ ದೂರು ನೀಡಿದರು. ಆದಾಗ್ಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. (ಇದಕ್ಕೆ ಕಾರಣರಾದ ಬೇಜವಾಬ್ದಾರಿ ಅಧಿಕಾರಿಗಳ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು) ಕೊನೆಗೆ ಬೇರೆ ದಾರಿ ಇಲ್ಲದೆ ಪ್ರಯಾಣಿಕರು ‘ಭೋಜಪುರ ಜಿಲ್ಲಾ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗ’ದ ಮೊರೆ ಹೋದರು.
೩. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಉತ್ತರ ಮಧ್ಯ ರೈಲ್ವೆ ಮತ್ತು ರೈಲ್ವೆ ಸಚಿವಾಲಯಕ್ಕೆ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವಿಕೆಯ ಹಣ (1 ಸಾವಿರದ 876 ರೂಪಾಯಿಗಳು) ಮತ್ತು ವರ್ಷದ ಶೇಕಡಾ 8 ರಷ್ಟು ಬಡ್ಡಿ ಸೇರಿ ಒಟ್ಟು 20 ಸಾವಿರ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡುವಂತೆ ರೈಲ್ವೆಗೆ ಆದೇಶಿಸಿದೆ. ಮುಂದಿನ 60 ದಿನಗಳ ಒಳಗಾಗಿ ಈ ಹಣವನ್ನು ಪ್ರಯಾಣಿಕರಿಗೆ ಪಾವತಿಸಬೇಕು ಮತ್ತು ಒಂದು ವೇಳೆ 60 ದಿನಗಳ ಒಳಗೆ ಹಣ ನೀಡದಿದ್ದರೆ ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!