ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ ! – Maulana Arshad Madani

ಜಮಿಯತ ಉಲೇಮಾ-ಎ-ಹಿಂದನ ಅಧ್ಯಕ್ಷ ಮೌಲಾನಾ ಅರ್ಶದ ಮದನಿಯವರಿಂದ ಸರಕಾರಕ್ಕೆ ಮನವಿ

(ಮೌಲಾನಾ ಎಂದರೆ ಇಸ್ಲಾಂನ ಅಧ್ಯಯನಕಾರರು)

ನವದೆಹಲಿ – ಬಕ್ರೀದನ ಹಿನ್ನೆಲೆಯಲ್ಲಿ ಜಮಿಯತ್ ಉಲೇಮಾ-ಎ-ಹಿಂದನ ಅಧ್ಯಕ್ಷರಾದ ಮೌಲಾನಾ ಅರ್ಶದ ಮದನಿಯವರು ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ, ಇದರಿಂದಾಗಿ ಈ ವಿಷಯದ ಕುರಿತು ನಡೆಯುವ ರಾಜಕೀಯ ಮತ್ತು ಹಿಂಸಾಚಾರವನ್ನು ಶಾಶ್ವತವಾಗಿ ತಡೆಯಬಹುದು. ‘ಹಸುವನ್ನು ಕಸಾಯಿಖಾನೆಗೆ ಮಾರುವವರು, ಖರೀದಿಸುವವರು ಮತ್ತು ಅದರ ಮಾಂಸವನ್ನು ತಿನ್ನುವವರೆಲ್ಲರೂ ದೋಷಿಗಳಾಗಿದ್ದಾರೆ’, ಎಂದೂ ಮದನಿಯವರು ಹೇಳಿದರು. (ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಿದೆ. ಆದರೂ ಮೌಲಾನಾ ಮದನಿಯವರು ತಮ್ಮ ಮತಬಾಂಧವರು ಸರಾಗವಾಗಿ ಗೋಹತ್ಯೆ ಮಾಡಿಯೇ ಮಾಡುತ್ತಾರೆ. ಅದನ್ನು ನಿರ್ಲಕ್ಷಿಸಿ ‘ಸರಕಾರ ಏನು ಮಾಡಬೇಕು’ ಎಂದು ಹೇಳುತ್ತಾ, ತನ್ನ ಮೇಲಿನ ಪಾಪವನ್ನು ತೊಳೆದುಕೊಳ್ಳುವ ಮದನಿಯವರ ಈ ಪ್ರಯತ್ನವು ಶೋಚನೀಯವಾಗಿದೆ ಎಂದೇ ಹೇಳಬೇಕು ! – ಸಂಪಾದಕರು)

ಬಕ್ರೀದಗಾಗಿ ಹಸುವಿನ ಬಲಿ ನೀಡಬೇಕೆಂದು ಎಲ್ಲಿಯೂ ಬರೆದಿಲ್ಲ ! – ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿ

ಈಗ ಇದರ ಬಗ್ಗೆ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿಯವರೂ ಒಂದು ಪ್ರಮುಖ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಅನೇಕ ಜನರಲ್ಲಿ ಪ್ರಾಣಿಗಳನ್ನು ಬಲಿ ನೀಡುವ ಪದ್ಧತಿಯಿದೆ; ಏಕೆಂದರೆ ಅದು ಅವರ ಧರ್ಮದ ಸಿದ್ಧಾಂತಗಳ ಅನುಸಾರವಿದೆ, ಅದು ಹಸುವಾಗಿರಲಿ, ಒಂಟೆಯಾಗಿರಲಿ ಅಥವಾ ಕುರಿ/ಮೇಕೆ ಆಗಿರಲಿ. ಈ ಭಾಗವು ಬೇರೆಯಾಗಿದೆ. ಒಂದು ವೇಳೆ ಗೋವಿನ ಬಲಿ ನೀಡುವುದಕ್ಕೆ ಜನರ ಆಕ್ಷೇಪವಿದ್ದರೆ, ಸರಕಾರವು ಮೌಲಾನಾ ಮದನಿಯವರ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಅನ್ಸಾರಿಯವರು ಮುಸಲ್ಮಾನರಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತಾ, ಬಕ್ರೀದಗಾಗಿ ನೀವು ಹಸುವನ್ನೇ ಬಲಿ ನೀಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ನೀವು ಕುರಿ/ಮೇಕೆಯನ್ನೂ ಬಲಿ ನೀಡಬಹುದು. ಕುರಿ/ಮೇಕೆಯನ್ನು ಖರೀದಿಸುವ ಸಾಮರ್ಥ್ಯವೂ ಇಲ್ಲದ ಅನೇಕ ಜನರಿದ್ದಾರೆ. ನಾನು ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಭಾರತ ಸರಕಾರ ಮತ್ತು ಅವರ ವಿವೇಚನೆಗೆ ಬಿಡುತ್ತೇನೆ ಎಂದರು.

ಸಂಪಾದಕೀಯ ನಿಲುವು

  • ಮುಸಲ್ಮಾನರ ‘ಮೂಗ’ನ್ನು ಒತ್ತಿದ ನಂತರ ಈಗ ಅವರ ‘ಬಾಯಿ’ ಈ ರೀತಿ ತೆರೆಯಲಾರಂಭಿಸಿದೆ ! ಸರಕಾರವು ಈಗ ಈ ಬೇಡಿಕೆಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
  • ಮೌಲಾನಾರವರು ‘ಗೋಹತ್ಯೆ ಮಾಡಬೇಡಿ. ಅದನ್ನು ಇಸ್ಲಾಂನಲ್ಲಿ ಹೇಳಿಲ್ಲ’, ಎಂದು ಫತ್ವಾಗಳನ್ನೇಕೆ ಹೊರಡಿಸುವುದಿಲ್ಲ? ಇದರಿಂದ ಅವರಿಗೆ ಹಸುವಿನ ಬಗ್ಗೆ ನಿಜವಾಗಿಯೂ ಎಷ್ಟು ಕಾಳಜಿಯಿದೆ ಎಂಬುದು ತಿಳಿಯುತ್ತದೆ.