‘ಜಮಾತ್-ಎ-ಇಸ್ಲಾಮಿ’ ಮುಖ್ಯಸ್ಥನ ಮನೆಯ ಮೇಲೂ ದಾಳಿ !

ಶ್ರೀನಗರ (ಜಮ್ಮು-ಕಾಶ್ಮೀರ) – ರಾಷ್ಟ್ರೀಯ ತನಿಖಾ ಸಂಸ್ಥೆಯು ಮೇ ೨೫ ರಂದು ‘ಜಮಾತ್-ಎ-ಇಸ್ಲಾಮಿ’ಗೆ ಸಂಬಂಧಿಸಿದ ಭಯೋತ್ಪಾದನಾ ಆರ್ಥಿಕ ನೆರವು ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಅನೇಕ ಭಾಗಗಳಲ್ಲಿ ದಾಳಿ ನಡೆಸಿತು. ಶೋಪಿಯಾನ್ ಮತ್ತು ಶ್ರೀನಗರದ ೩ ಸ್ಥಳಗಳಲ್ಲಿ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದನಾ ಆರ್ಥಿಕ ನೆರವಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಜಪ್ತಿ ಮಾಡಲಾಯಿತು. ಶೋಪಿಯಾನ್‌ನಲ್ಲಿ ‘ಭಯೋತ್ಪಾದಕರ ಅಡ್ಡೆ’ಯಾಗಿದ್ದ ‘ದಾರುಲ್-ಉಲೂಮ್-ಸಿರಾಜುಲ್-ಉಲೂಮ್’ ಎಂಬ ಮದರಸಾದ ಮೇಲೆ ದಾಳಿ ನಡೆಸಲಾಯಿತು. ‘ಜಮಾತ್-ಎ-ಇಸ್ಲಾಮಿ’ ಮುಖ್ಯಸ್ಥ ಶಹಜಾದಾ ಔರಂಗಜೇಬ್ ಅವನ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು. ಹಾಗೆಯೇ ಶ್ರೀನಗರದಲ್ಲಿನ ‘ಜಮಿಯತ್-ಉಲ್-ಬನಾತ್’ ಎಂಬ ಹುಡುಗಿಯರ ಮದರಸಾದ ಮೇಲೂ ದಾಳಿ ನಡೆಸಲಾಯಿತು.
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ‘ಜಮಾತ್-ಎ-ಇಸ್ಲಾಮಿ’ ಮೇಲೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಪ್ರತ್ಯೇಕತಾವಾದಿ ವಿಚಾರಧಾರೆಯನ್ನು ಬೆಂಬಲಿಸುವುದು ಮತ್ತು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಮುಂತಾದ ಆರೋಪಗಳಿವೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”