ಅನೇಕ ಮುಸಲ್ಮಾನರ ಸ್ಮಶಾನಗಳು ಮತ್ತು ದರ್ಗಾಗಳೂ ಸೇರಿವೆ
(ದರ್ಗಾ ಎಂದರೆ ಮುಸ್ಲಿಮರ ಹೇಳಿಕೆಯ ಸಿದ್ಧಪುರುಷರ ಸಮಾಧಿ ಸ್ಥಳ)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಗಳ `ಗಣಕೀಕರಣ’ ಪ್ರಕ್ರಿಯೆಯಲ್ಲಿ ಪ್ರಮುಖ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದಾಗಿ ಸತತವಾಗಿ ನೋಂದಣಿಗಳನ್ನು ರದ್ದುಗೊಳಿಸಲಾಗುತ್ತಿದೆ. ಇದುವರೆಗೆ ‘ಉಮ್ಮೀದ್’ ಪೋರ್ಟಲ್‌ನಲ್ಲಿ (ಸಂಕೇತಸ್ಥಳದಲ್ಲಿ) ನೋಂದಾಯಿಸಲಾದ ೧ ಲಕ್ಷ ೧೮ ಸಾವಿರ ೩೦೨ ಆಸ್ತಿಗಳ ಪೈಕಿ ೩೧ ಸಾವಿರ ೩೨೮ ಆಸ್ತಿಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಅನೇಕ ಹಳೆಯ ಮುಸಲ್ಮಾನರ ಸ್ಮಶಾನಗಳು ಮತ್ತು ದರ್ಗಾಗಳ ಆಸ್ತಿಗಳೂ ಸೇರಿರುವ ಸಾಧ್ಯತೆಯಿದೆ. ತನಿಖೆಯ ವೇಳೆ ಈ ವಕ್ಫ್ ಆಸ್ತಿಗಳ ದಾಖಲೆಗಳಲ್ಲಿ ಅನೇಕ ಲೋಪದೋಷಗಳು ಕಂಡುಬಂದಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಲ್ಪಸಂಖ್ಯಾತರ ಸಚಿವಾಲಯವು ಕಳೆದ ವರ್ಷ ಜೂನ್ ೫ ರಂದು ಪ್ರಾರಂಭಿಸಿದ ‘ಉಮ್ಮೀದ್’ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯು ನಡೆಯುತ್ತಿದೆ.
ಇದುವರೆಗೆ ೫೩ ಸಾವಿರ ಆಸ್ತಿಗಳಿಗೆ ಅನುಮೋದನೆ
ಆರಂಭಿಕ ಹಂತದಲ್ಲಿ ನೋಂದಣಿಗಾಗಿ ೬ ತಿಂಗಳ ಕಾಲಾವಕಾಶ ನೀಡಲಾಗಿತ್ತು; ಆದರೆ ಉತ್ತರಪ್ರದೇಶ ಸುನ್ನಿ ಮತ್ತು ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್‌ಗಳ ಮನವಿಯ ಮೇರೆಗೆ ವಕ್ಫ್ ನ್ಯಾಯಾಧಿಕರಣವು ನೋಂದಣಿಯ ಗಡುವನ್ನು ಮತ್ತೊಂದು ೬ ತಿಂಗಳವರೆಗೆ ವಿಸ್ತರಿಸಿತ್ತು. ಈ ಹೆಚ್ಚುವರಿ ಗಡುವು ಮುಂದಿನ ತಿಂಗಳ ಜೂನ್ ೫ ರಂದು ಮುಕ್ತಾಯಗೊಳ್ಳುತ್ತಿದೆ. ಇದುವರೆಗೆ ಕೇವಲ ೫೩ ಸಹಸ್ರಕ್ಕೂ ಹೆಚ್ಚು ಆಸ್ತಿಗಳಿಗೆ ಮಾತ್ರ ಸಮ್ಮತಿ ದೊರೆಯಲು ಸಾಧ್ಯವಾಗಿದೆ. ೨೦ ಸಹಸ್ರ ೫೪೬ ಆಸ್ತಿಗಳ ದಾಖಲೆಗಳ ಪರಿಶೀಲನೆಯು ಅಂತಿಮ ಹಂತದಲ್ಲಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!