ಭೋಜಶಾಲೆ ಪ್ರಕರಣ: ಮುಸಲ್ಮಾನ ಪಕ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು

ಧಾರ (ಮಧ್ಯಪ್ರದೇಶ) – ಭೋಜಶಾಲೆ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಖಂಡಪೀಠವು ನೀಡಿದ ನಿರ್ಣಯದ ವಿರುದ್ಧ ಮುಸಲ್ಮಾನ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ನೀಡಿತು. ಮುಸಲ್ಮಾನ ಪಕ್ಷವು ವಿಶೇಷ ಅನುಮತಿ ಅರ್ಜಿಯನ್ನು ಸಲ್ಲಿಸಿತು. ಉಚ್ಚ ನ್ಯಾಯಾಲಯವು ೬ ದಿನಗಳ ಹಿಂದೆ ಭೋಜಶಾಲೆ ಪರಿಸರವನ್ನು ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಾಚೀನ ಧಾರ್ಮಿಕ ಸ್ಥಳವೆಂದು ಪರಿಗಣಿಸಿತ್ತು.
ಮುಸಲ್ಮಾನ ಸಮಾಜದ ‘ಸದರ’ (ಧಾರ್ಮಿಕ ಕೆಲಸಕಾರ್ಯಗಳು, ಮದರಸಾಗಳು, ವಕ್ಫ್ ಆಸ್ತಿಪಾಸ್ತಿಗಳ ಮೇಲ್ವಿಚಾರಣೆ ಮಾಡುವ ಅಧಿಕಾರಿ) ಅಬ್ದುಲ ಸಮದರು, “ಈ ನಿರ್ಣಯದಿಂದ ಸಮಾಜದಲ್ಲಿ ನಿರಾಶೆಯಿದೆ ಮತ್ತು ಅದು ಏಕಪಕ್ಷೀಯವಾಗಿದೆ ಎಂದು ಹೇಳಿ ಅದಕ್ಕೆ ಸವಾಲು ನೀಡಲಾಗಿದೆ” ಎಂದು ಹೇಳಿದರು. ಹಿರಿಯ ನ್ಯಾಯವಾದಿ ಸಲ್ಮಾನ ಖುರ್ಷೀದರು ಈ ಪ್ರಕರಣದಲ್ಲಿ ಶೀಘ್ರ ವಿಚಾರಣೆ ಮತ್ತು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡುವ ಬೇಡಿಕೆಯನ್ನು ಮಂಡಿಸುವರು. ನ್ಯಾಯಾಲಯದ ಎದುರು ಕೆಲವು ಮಹತ್ವದ ತಥ್ಯಗಳನ್ನು ಯೋಗ್ಯ ರೀತಿಯಲ್ಲಿ ಮಂಡಿಸಿಲ್ಲ. ಕಮಾಲ ಮೌಲಾ ಮಸೀದಿಯಲ್ಲಿ ಅಂದಾಜು ೭೦೦ ವರ್ಷಗಳಿಂದ ಶುಕ್ರವಾರದ ನಮಾಜ ಮಾಡುತ್ತಿದ್ದಾರೆ. ಈ ಪರಂಪರೆಯ ಮೇಲೆ ಪರಿಣಾಮವಾಗಿರುವುದರಿಂದ ಸಮಾಜದಲ್ಲಿ ದುಃಖವಿದೆ; ಆದರೆ ಈ ಹೋರಾಟವನ್ನು ಸಂಪೂರ್ಣವಾಗಿ ಸಾಂವಿಧಾನಿಕ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡುವೆವು, ಎಂದು ಹೇಳಿದರು.
ಶಹರ ಖಾಜಿ (ಇಸ್ಲಾಮಿ ಕಾನೂನುತಜ್ಞ ಮತ್ತು ನ್ಯಾಯಾಧೀಶ) ವಕಾರ ಸಾದಿಕರು, “ಮುಸಲ್ಮಾನ ಸಮಾಜವು ನ್ಯಾಯವ್ಯವಸ್ಥೆಯನ್ನು ಗೌರವಿಸುತ್ತದೆ ಮತ್ತು ಈಗ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯದ ನಿರೀಕ್ಷೆಯಿದೆ” ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ