
ಬಾಗಲಕೋಟೆ – ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾ ದೇವಸ್ಥಾನದಲ್ಲಿ ಓರ್ವ ಮುಸಲ್ಮಾನ ಯುವತಿಯು ಚಪ್ಪಲಿ ಧರಿಸಿ ಕುಳಿತಿರುವುದನ್ನು ಕಂಡು ಕೆಲವು ಹಿಂದೂ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂಗಳು ಈ ಮುಸಲ್ಮಾನ ಯುವತಿಯ ಕೃತ್ಯವನ್ನು ದೊಡ್ಡ ಪ್ರಮಾಣದಲ್ಲಿ ಖಂಡಿಸುತ್ತಿದ್ದಾರೆ.
ವಿಡಿಯೋದಲ್ಲಿ ಚಿತ್ರಣವಾದ ಘಟನೆ ಹೀಗಿದೆ…!
ಕೆಲವು ದಿನಗಳ ಹಿಂದೆ ಓರ್ವ ಮುಸಲ್ಮಾನ ಯುವತಿಯು ಚಪ್ಪಲಿ ಧರಿಸಿ ದೇವಸ್ಥಾನದಲ್ಲಿ ಕುಳಿತಿದ್ದಳು. ಆಗ ಅಲ್ಲಿ ಉಪಸ್ಥಿತರಿದ್ದ ಓರ್ವ ಮಹಿಳಾ ಪ್ರವಾಸಿಗರು ಈ ವರ್ತನೆಯನ್ನು ಕಂಡು ತಕ್ಷಣವೇ ಆಕೆಯನ್ನು ಪ್ರಶ್ನಿಸಿದರು. ‘ಹಿಂದೂ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ನಮ್ಮ ಶ್ರದ್ಧೆಗೆ ಏಕೆ ಧಕ್ಕೆ ತಂದಿದ್ದೀರಿ ?’, ಎಂದು ಕೇಳುತ್ತಾ ಮಹಿಳೆಯು ಈ ಮುಸಲ್ಮಾನ ಹುಡುಗಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ‘ನಾನು ಇಲ್ಲಿನ ಸಿಬ್ಬಂದಿಯಾಗಿದ್ದೇನೆ’, ಎಂದು ಹೇಳುತ್ತಾ ಆ ಯುವತಿಯು ಸ್ಪಷ್ಟೀಕರಣ ನೀಡಿದಳು. ಆಕೆಯ ಕೊರಳಿನಲ್ಲಿ ಗುರುತಿನ ಚೀಟಿ ಇರುವುದು ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ; ಆದರೆ ಇತರ ಪ್ರವಾಸಿಗರೂ ‘ನೀವು ಇಲ್ಲಿನ ಸಿಬ್ಬಂದಿಯಾಗಿದ್ದರೆ, ನಿಮಗೆ ಈ ಸ್ಥಳದ ಪಾವಿತ್ರ್ಯತೆಯ ಬಗ್ಗೆ ಮಾಹಿತಿ ಇರಬೇಕು. ನಿಮಗೆ ಇಲ್ಲಿನ ಪರಂಪರೆಯನ್ನು ಗೌರವಿಸಲು ಗೊತ್ತಿಲ್ಲವೇ ?’, ಎಂಬ ಮಾತುಗಳಲ್ಲಿ ಮುಸಲ್ಮಾನ ಯುವತಿಯನ್ನು ತರಾಟೆಗೆ ತೆಗೆದುಕೊಂಡರು. ‘ನಮ್ಮ ಧಾರ್ಮಿಕ ಭಾವನೆಗಳನ್ನು ಅವಮಾನಿಸಬೇಡಿ’, ಎಂಬ ಎಚ್ಚರಿಕೆಯನ್ನೂ ಹಿಂದೂಗಳು ಆಕೆಗೆ ನೀಡಿದರು.
ಬಾದಾಮಿ ಗುಹೆಗಳ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ !
ಬಾದಾಮಿಯ ಗುಹೆ ದೇವಸ್ಥಾನಗಳು ಕೇವಲ ಪ್ರವಾಸಿ ಸ್ಥಳಗಳಾಗಿಲ್ಲ, ಅವು ಹಿಂದೂಗಳ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ. ಚಾಲುಕ್ಯರ ಕಾಲದ ಅದ್ಭುತ ಶಿಲ್ಪಕಲೆ ಮತ್ತು ದೈವತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”