
ರೋಮ್ (ಇಟಲಿ)/ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಪ್ರವಾಸ ನಡೆಯುತ್ತಿದ್ದು, ಪ್ರಸ್ತುತ ಅವರು ಇಟಲಿಯಲ್ಲಿದ್ದಾರೆ. ಪ್ರವಾಸದ ವೇಳೆ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಜಂಟಿಯಾಗಿ, ಭಾರತ ಮತ್ತು ಇಟಲಿ ನಡುವಿನ ಸಂಬಂಧವು ಈಗ ಒಂದು ನಿರ್ಣಾಯಕ ಘಟ್ಟವನ್ನು ತಲುಪಿದೆ ಎಂದು ಹೇಳಿದ್ದಾರೆ. ಸೌಹಾರ್ದಯುತ ಸ್ನೇಹವನ್ನು ಮೀರಿ, ಈ ಸಂಬಂಧವು ಈಗ ಒಂದು ವಿಶೇಷ ಕಾರ್ಯತಂತ್ರದ (ಸ್ಟ್ರಾಟಜಿಕ್) ಪಾಲುದಾರಿಕೆಯಾಗಿ ರೂಪಾಂತರಗೊಂಡಿದೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡಬಾರದೆಂಬುದು ಭಾರತದ ನಿರೀಕ್ಷೆ!
ಈ ಹೇಳಿಕೆಯ ನಂತರ, ಇಟಲಿ ತಾನು ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವ ಶಸ್ತ್ರಾಸ್ತ್ರ ರಫ್ತಿಗೆ ಕಡಿವಾಣ ಹಾಕುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಕಳೆದ ತಿಂಗಳಷ್ಟೇ ಭಾರತ ಮತ್ತು ಇಟಲಿ ರಕ್ಷಣಾ ಸಚಿವರ ನಡುವೆ ಸಭೆ ನಡೆದಿತ್ತು. ಆಗ ರಾಜನಾಥ್ ಸಿಂಗ್ ಅವರು, ಇಟಲಿ ತನ್ನ ರಕ್ಷಣಾ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ನೀಡಬಾರದೆಂದು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಅವರಿಗೆ ಸ್ಪಷ್ಟಪಡಿಸಿದ್ದರು. ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಭಾರತ ಉಲ್ಲೇಖಿಸಿತ್ತು.
ಇಟಲಿ ಮತ್ತು ಪಾಕಿಸ್ತಾನ ನಡುವಿನ ಶಸ್ತ್ರಾಸ್ತ್ರ ವ್ಯಾಪಾರ!
1. ಚೀನಾದ ನಂತರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಮುಖ ಯುರೋಪಿಯನ್ ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ.
2. ಪಾಕಿಸ್ತಾನವು ತನ್ನ ಸೈನ್ಯದ ಆಧುನೀಕರಣಕ್ಕಾಗಿ ಇಟಲಿಯಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ.
3. ಇಟಾಲಿಯನ್ ಶಸ್ತ್ರಾಸ್ತ್ರ ರಫ್ತಿನಲ್ಲಿ ಪಾಕಿಸ್ತಾನದ ಪಾಲು ಸರಿಸುಮಾರು ಶೇಕಡಾ 7.5% ರಷ್ಟಿದೆ.
4. ಕಳೆದ ವರ್ಷ ಪಾಕಿಸ್ತಾನಕ್ಕೆ ಇಟಲಿ ರಫ್ತು ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅವುಗಳ ಬಿಡಿಭಾಗಗಳ ಒಟ್ಟು ಮೌಲ್ಯ 5 ಕೋಟಿ 41 ಲಕ್ಷಕ್ಕೂ ಹೆಚ್ಚು ಅಮೆರಿಕನ್ ಡಾಲರ್ (5,240 ಕೋಟಿ ರೂಪಾಯಿ) ಎಂದು ದಾಖಲಾಗಿದೆ.
5. ಪಾಕಿಸ್ತಾನವು ಇಟಲಿಯಿಂದ ಮುಖ್ಯವಾಗಿ ಫಿರಂಗಿಗಳು, ಮಿಲಿಟರಿ ಹೆಲಿಕಾಪ್ಟರ್‌ಗಳು, ರಾಡಾರ್‌ಗಳು, ನೌಕಾಪಡೆ ವ್ಯವಸ್ಥೆಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಮದ್ದುಗುಂಡುಗಳನ್ನು ಖರೀದಿಸುತ್ತದೆ.
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal