
ನವ ದೆಹಲಿ – ಮತದಾರರ ಪಟ್ಟಿಯಿಂದ ಇತರ ಎಲ್ಲಾ ದೇಶಗಳ ನಾಗರಿಕರ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಕೇಂದ್ರ ಕಲ್ಲಿದ್ದಲು ಗಣಿ ಸಚಿವ ಜಿ. ಕಿಶನರೆಡ್ಡಿ ಅವರು ಇತ್ತೀಚೆಗೆ ಹೇಳಿದ್ದಾರೆ. ದೇಶದ ಮತದಾರರ ಪಟ್ಟಿಯಲ್ಲಿ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ವ್ಯಕ್ತಿಯ ಹೆಸರು ಕಂಡುಬಂದರೆ, ಅದನ್ನು ತೆಗೆದುಹಾಕಬೇಕು. ಕೇವಲ ಭಾರತೀಯ ನಾಗರಿಕರ ಹೆಸರುಗಳು ಮಾತ್ರ ಈ ಮತದಾರರ ಪಟ್ಟಿಯಲ್ಲಿ ಇರಬೇಕು ಎಂದು ರೆಡ್ಡಿ ಹೇಳಿದರು. (ಅದರೊಂದಿಗೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಜವಾಬ್ದಾರರಾಗಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
೧. ಎಲ್ಲಾ ರಾಜಕೀಯ ಪಕ್ಷಗಳು ‘ಬೂತ್ ಲೆವೆಲ್ ಏಜೆಂಟ್’ (ಬಿ.ಎಲ್.ಎ.) ರನ್ನು ನೇಮಿಸಬೇಕು ಮತ್ತು ಮತದಾರರ ಪಟ್ಟಿಯ ‘ವಿಶೇಷ ಆಳವಾದ ಪುನರಾವಲೋಕನ’ (ಎಸ್.ಐ.ಆರ್.) ಪ್ರಕ್ರಿಯೆಯ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಹಕರಿಸಬೇಕು ಎಂದು ರೆಡ್ಡಿ ಅವರು ಕರೆ ನೀಡಿದರು.
೨. ಭಾಜಪದ ಮತದಾನ ಕೇಂದ್ರ ಮಟ್ಟದ ಕಾರ್ಯಕರ್ತರು ಈ ಪಟ್ಟಿಯ ಬಗ್ಗೆ ಚುನಾವಣಾ ಆಯೋಗಕ್ಕೆ ಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಜಿ. ಕಿಶನ್ ರೆಡ್ಡಿ ಅವರು ಭಾರತೀಯರಿಗೆ ಭರವಸೆ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ