೨೫೦ ಮುಸಲ್ಮಾನರ ಗುಂಪಿನಿಂದ ಪೊಲೀಸರ ಮೇಲೆ ಕಲ್ಲು ತೂರಾಟ
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರಿಂದ ಲಾಠಿಚಾರ್ಜ್

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರವು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿದೆ. ಇದನ್ನು ವಿರೋಧಿಸಿ ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿ ಮುಸಲ್ಮಾನರು ಪ್ರತಿಭಟನೆ ಮಾಡಲು ಯತ್ನಿಸಿದರು. ಈ ವೇಳೆ ಅವರು ಹಿಂಸಾಚಾರಕ್ಕೆ ಇಳಿದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದರು.
ಮೇ ೧೭ ರಂದು ಆಡಳಿತದಿಂದ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೇ ವೇಳೆ ರಸ್ತೆಯಲ್ಲಿ ನಮಾಜ್ ಮಾಡುವ ವಿಚಾರದಲ್ಲಿ ವಿವಾದ ಶುರುವಾಯಿತು. ೨೫೦ ಕ್ಕೂ ಹೆಚ್ಚು ಮುಸ್ಲಿಂ ಪ್ರತಿಭಟನಾಕಾರರು ಕಾರ್ಯಾಚರಣೆಯನ್ನು ವಿರೋಧಿಸಿದರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು ಮತ್ತು ವಿರೋಧ ವ್ಯಕ್ತಪಡಿಸುತ್ತಾ ಜನರಿಗೂ ಇದರಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಈ ವೇಳೆ ಪೊಲೀಸ್ ಮತ್ತು ಮುಸಲ್ಮಾನರ ನಡುವೆ ತಳ್ಳಾಟವೂ ನಡೆಯಿತು. ಹದಗೆಟ್ಟ ಪರಿಸ್ಥಿತಿಯನ್ನು ಕಂಡು ಪೊಲೀಸರು ಪ್ರದೇಶವನ್ನು ಸುತ್ತುವರೆದರು. ಹೆಚ್ಚುವರಿ ಭದ್ರತಾ ಪಡೆಗಳನ್ನು ಕರೆಯಿಸಲಾಯಿತು. ಪೊಲೀಸರು ಬಲಪ್ರಯೋಗ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಹಿಂಸಾತ್ಮಕ ಘರ್ಷಣೆಯಲ್ಲಿ ೩ ಪೊಲೀಸ್ ಸಿಬ್ಬಂದಿ ಗಾಯಗೊಂಡರು.
ಕಾನೂನುಬಾಹಿರ ಮುಸಲ್ಮಾನರನ್ನು ಬೆಂಬಲಿಸುತ್ತಿರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ!
ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಮೊಹಮ್ಮದ್ ಸಲೀಂ ಮಾತನಾಡಿ, ಜನರು ರಸ್ತೆಗಿಳಿಯುವಂತಹ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬಾರದು ಎಂದು ಹೇಳಿದರು. (ರಸ್ತೆಯಲ್ಲಿ ನಮಾಜ್ ಮಾಡುವುದು ಸರಕಾರದ ನಿರ್ಧಾರ ಎಂದು ಸಲೀಂ ಹೇಳಲು ಬಯಸುತ್ತಾರೆಯೇ? – ಸಂಪಾದಕರು) ಜನರು ಚುನಾವಣೆಯಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಜನರು ಬದಲಾವಣೆಯನ್ನು ಒತ್ತಾಯಿಸುತ್ತಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿ ಎಂದು ಹೀಗೆ ಮಾಡಲಾಗಿಲ್ಲ. ಸರಕಾರ ಈಗ ಪರಿಸ್ಥಿತಿಯನ್ನು ಸುಧಾರಿಸಬೇಕು. ಜನರು ಶಾಂತಿ ಮತ್ತು ಸುವ್ಯವಸ್ಥೆಗಾಗಿ ಮತ ಹಾಕಿದ್ದಾರೆ. ಇದನ್ನು ಮುರಿದರೆ, ಜನರು ಖಂಡಿತ ರಸ್ತೆಗಿಳಿಯುತ್ತಾರೆ. (ಕಾನೂನು ಮತ್ತು ಸುವ್ಯವಸ್ಥೆಗಾಗಿ ಹಿಂದೂಗಳು ಮತ ಚಲಾಯಿಸಿದ್ದಾರೆ ಮತ್ತು ಅದರಂತೆಯೇ ಬಂಗಾಳದ ಭಾಜಪ ಸರಕಾರವು ಕೆಲಸ ಮಾಡುತ್ತಿದೆ. ಯಾರು ಇದರ ವಿರುದ್ಧ ರಸ್ತೆಗೆ ಬರುತ್ತಾರೋ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದೇ ಈ ಘಟನೆಯಿಂದ ತಿಳಿದುಬರುತ್ತದೆ! – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”