ಹಿಂದೂಗಳ ವಿರೋಧದ ನಂತರ ಶಿಕ್ಷಕಿ ಹಿಬಾ ಫಾತಿಮಾಳನ್ನು ಕೆಲಸದಿಂದ ವಜಾ

ಕಾನ್ಪುರ (ಉತ್ತರ ಪ್ರದೇಶ) – ಇಲ್ಲಿನ ಮದರ್ ತೆರೇಸಾ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ೬ನೇ ತರಗತಿಯ ವಿದ್ಯಾರ್ಥಿಯೊಬ್ಬ ಕೇವಲ ಹಣೆ ಮೇಲೆ ತಿಲಕ ಇಟ್ಟುಕೊಂಡು ಶಾಲೆಗೆ ಬಂದಿದ್ದರಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಶಿಕ್ಷಕಿ ಹಿಬಾ ಫಾತಿಮಾ ವಿದ್ಯಾರ್ಥಿಗೆ ತಿಲಕವನ್ನು ಅಳಿಸಲು ಹೇಳಿದ್ದಲ್ಲದೆ, ಆತನಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಘಟನೆಯ ನಂತರ ವಿದ್ಯಾರ್ಥಿ ಅಳುತ್ತಾ ಮನೆಗೆ ತಲುಪಿ ತನ್ನ ಮನೆಯವರಿಗೆ ಎಲ್ಲ ವಿಷಯವನ್ನು ತಿಳಿಸಿದನು. ಆನಂತರ ಮನೆಯವರು ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದರು. ಘಟನೆಯ ಮಾಹಿತಿ ತಿಳಿದ ತಕ್ಷಣ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿ ಶಾಲೆಯ ಹೊರಗೆ ಭಾರಿ ಪ್ರತಿಭಟನೆ ನಡೆಸಿದರು. ಅವರು ಆರೋಪಿ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪೊಲೀಸರ ಸಮ್ಮುಖದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಒಂದು ಗಂಟೆ ಕಾಲ ಚರ್ಚೆ ನಡೆಯಿತು. ಹೆಚ್ಚುತ್ತಿರುವ ಒತ್ತಡದ ನಂತರ ಶಾಲಾ ಆಡಳಿತ ಮಂಡಳಿಯು ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಿತು. ಆನಂತರ ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರು ಶಾಂತರಾದರು. (ಇದರರ್ಥ ಒಂದು ವೇಳೆ ಹಿಂದುತ್ವವಾದಿಗಳು ಈ ಘಟನೆಗೆ ಆಕ್ಷೇಪ ವ್ಯಕ್ತಪಡಿಸದಿದ್ದರೆ, ಕೇವಲ ಮನೆಯವರ ದೂರಿನ ಮೇರೆಗೆ ಶಾಲೆ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಹಿಂದೂಗಳೇ, ಇದರಿಂದ ಹಿಂದುತ್ವವಾದಿ ಸಂಘಟನೆಗಳ ಮಹತ್ವವನ್ನು ಅರಿತುಕೊಳ್ಳಿ ಮತ್ತು ಅವರ ಸಹಾಯವನ್ನು ಪಡೆಯುವುದರ ಜೊತೆಗೆ ಅವರ ಬೆನ್ನಿಗೆ ನಿಲ್ಲಿ! – ಸಂಪಾದಕರು)
ಎಬಿವಿಪಿಯ ಮಹಾನಗರ ಕಾರ್ಯದರ್ಶಿ ಸುಧಾಂಶು ತ್ರಿಪಾಠಿ ಮಾತನಾಡಿ, ತಿಲಕವು ಸನಾತನ ಸಂಸ್ಕೃತಿಯ ಸಂಕೇತವಾಗಿದೆ ಮತ್ತು ಯಾವುದೇ ವಿದ್ಯಾರ್ಥಿಗೆ ಆತನ ಧಾರ್ಮಿಕ ಸಂಕೇತದ ಕಾರಣಕ್ಕಾಗಿ ಕಿರುಕುಳ ನೀಡುವುದು ತಪ್ಪು, ಎಂದು ಹೇಳಿದರು.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein