(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವನು)

ಲಂಡನ್ (ಬ್ರಿಟನ್) – ತನಗೆ ಅಲೌಕಿಕ ಶಕ್ತಿಯಿದೆ ಎಂದು ಹೇಳಿಕೊಂಡು 12 ವರ್ಷದ ಸಣ್ಣ ಹೆಣ್ಣುಮಕ್ಕಳು ಸೇರಿದಂತೆ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಭಾರತೀಯ ಮೂಲದ ಇಮಾಮ್ ಅಬ್ದುಲ್ ಹಲೀಮ್ ಖಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
1. ಆರೋಪಿಯು ವಿಶೇಷವಾಗಿ ಬಾಂಗ್ಲಾದೇಶಿ ಮುಸಲ್ಮಾನ್ ಸಮುದಾಯದ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿದ್ದನು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇಮಾಮ್ ಗಿರುವ ಅಧಿಕಾರ ಮತ್ತು ಶೋಷಣೆಯ ನಾಚಿಕೆಯ ಭಾವನೆಯಿಂದಾಗಿ ಸಂತ್ರಸ್ತ ಮಹಿಳೆಯರು ಅವನ ವಿರುದ್ಧ ದೂರು ನೀಡುವುದಿಲ್ಲ ಎಂದು ಭಾವಿಸಿ ಆತ ಈ ಕೆಲಸ ಮಾಡಿದ್ದನು.
2. ಅಬ್ದುಲ್ ಹಲೀಮ್ ಖಾನ್ ತನ್ನ ಧಾರ್ಮಿಕ ಪದ್ದತಿಯನ್ನು ದುರ್ಬಳಕೆ ಮಾಡಿಕೊಂಡು 2005 ರಿಂದ 2014 ರವರೆಗಿನ 9 ವರ್ಷಗಳ ಅವಧಿಯಲ್ಲಿ 7 ಮುಸಲ್ಮಾನ್ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ಬ್ರಿಟನ್ ನ ‘ದ ಇಂಡಿಪೆಂಡೆಂಟ್’ ವಾರ್ತಾ ಸಂಸ್ಥೆ ವರದಿ ಮಾಡಿದೆ. ‘ಬಲವಂತವಾಗಿ ಲೈಂಗಿಕ ದೌರ್ಜನ್ಯ ಮಾಡುವಾಗ ನನ್ನ ದೇಹದಲ್ಲಿ ‘ಅಲೌಕಿಕ ಆತ್ಮ’ ಆವೇಶವಾಗಿತ್ತು ಅಥವಾ ನಾನು ಆ ಅಲೌಕಿಕ ರೂಪದಲ್ಲಿದ್ದೆ ಎಂದು ಆತ ಸಂತ್ರಸ್ತರಿಗೆ ಹೇಳಿದ್ದನು’ ಎಂದು ಬ್ರಿಟನ್ ನ ‘ಸ್ಕೈ ನ್ಯೂಸ್’ ವರದಿ ಮಾಡಿದೆ.
3. ‘ಬಿಬಿಸಿ’ ವರದಿಯ ಪ್ರಕಾರ, ಇಮಾಮ್ ಅಪ್ರಾಪ್ತ ಸಂತ್ರಸ್ತೆಯೊಬ್ಬಳಿಗೆ ಆಕೆಯ ಗರ್ಭಾಶಯದ ಕ್ಯಾನ್ಸರ್ ಅನ್ನು ತಾನು ಮಾತ್ರ ಗುಣಪಡಿಸಬಲ್ಲೆ ಎಂದು ನಂಬಿಸಿದ್ದನು. ತದನಂತರ ಆಕೆಯನ್ನು ತನ್ನ ಕಾರಿನಲ್ಲಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದನು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers