
ಬೆಂಗಳೂರು – ಕ್ರಿ.ಶ 711ರಲ್ಲಿ ಆರಂಭವಾದ ಆಕ್ರಮಣಕಾರಿ ಮನಸ್ಥಿತಿಯು ಇಂದು ಕೇವಲ ಯುದ್ಧಕ್ಕೆ ಸೀಮಿತವಾಗಿಲ್ಲ. ಬದಲಾಗಿ ಅದು ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಮತ್ತು ಇತ್ತೀಚಿನ ‘ಕಾರ್ಪೊರೇಟ್ ಜಿಹಾದ್’ ನಂತಹ ವಿಭಿನ್ನ ರೂಪಗಳನ್ನು ಪಡೆದುಕೊಂಡಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಕಳವಳ ವ್ಯಕ್ತಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಬಸವನಗುಡಿಯ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಪೊರೇಟ್ ಜಿಹಾದ್ : ಮಿಥ್ಯ ಮತ್ತು ವಾಸ್ತವ’ ಕುರಿತು ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಈ ಸಂಧರ್ಭದಲ್ಲಿ ರಣರಾಗಿಣಿ ಶಾಖೆಯ ವಕ್ತಾರರಾದ ಸೌ. ಭವ್ಯ ಗೌಡ, ಸ್ಟಾರ್ಟ್ ಅಪ್ ಎಕ್ಸ್ಪೆರ್ಟ್ ನ ಸಹ ಸಂಚಾಲಕರಾದ ಸೌ. ಶಕುಂತಲಾ ಅಯ್ಯರ್, ಕ್ಲಿನಿಕಲ್ ಸಂಶೋಧನಾ ತಜ್ಞೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಡಾ. ರೂಪ ಗಣೇಶ ಸೇರಿದಂತೆ 300 ಅಧಿಕ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

ಶ್ರೀ.ಮೋಹನ್ ಗೌಡ ‘ಮುಂದೆ ಮಾತನಾಡುತ್ತ ವಿಷನ್ 2047’ ಮತ್ತು ‘ಘಜ್ವಾ-ಎ-ಹಿಂದ್’ ನಂತಹ ಕಾರ್ಯಸೂಚಿಗಳ ಮೂಲಕ ಭಾರತದ ಅಖಂಡತೆಯನ್ನು ಒಡೆಯುವ ಮತ್ತು ಜನಸಂಖ್ಯಾ ಸಮತೋಲನವನ್ನು ಏರುಪೇರು ಮಾಡುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಆತಂಕಕಾರಿ ವಿಷಯವಾಗಿದೆ. ಟಿ. ಸಿ. ಎಸ್ ನಲ್ಲಿ ಕಳೆದ 6 ವರ್ಷಗಳಿಂದ ಅಲ್ಲಿನ ಹಿಂದೂ ಮಹಿಳಾ ನೌಕರರಿಗೆ ನರಕಯಾತನೆ ನೀಡಲಾಗಿತ್ತು. ಪ್ರಮೋಷನ್‌ಗಾಗಿ ನಮಾಜ್ ಮಾಡುವುದು, ಸಂಬಳ ಹೆಚ್ಚಳಕ್ಕಾಗಿ ಬೀಫ್ ತಿನ್ನುವುದು ಮತ್ತು ಹಿಂದೂ ದೇವರುಗಳ ಅವಮಾನವನ್ನು ಸಹಿಸುವಂತೆ ಒತ್ತಡ ಹೇರಲಾಗಿತ್ತು. ಹಿಂದೂ ಸಮಾಜ ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ “ಬೇಟಿ ಸುರಕ್ಷಾ – ರಾಷ್ಟ್ರ ಸುರಕ್ಷಾ” ಅಭಿಯಾನದಡಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ಹಿಂದೂ ಸಮಾಜಕ್ಕೆ ಎರಡು ಪ್ರಮುಖ ಅರಿವುಗಳ ಅಗತ್ಯವಿದೆ. ಸ್ವಬೋಧ: ನಮ್ಮ ಶ್ರೇಷ್ಠ ಪರಂಪರೆ ಮತ್ತು ಧರ್ಮದ ಬಗ್ಗೆ ನಮಗೆ ಹೆಮ್ಮೆ ಮತ್ತು ಅರಿವಿರಬೇಕು.
ಶತ್ರುಬೋಧ: ಸಮಾಜವನ್ನು ಒಡೆಯಲು ಹೊಂಚು ಹಾಕುತ್ತಿರುವ ಶಕ್ತಿಗಳನ್ನು ಗುರುತಿಸುವ ಜಾಣ್ಮೆ ಇರಬೇಕು.
ರಾಗಿಣಿ ಶಾಖೆಯ ರಾಜ್ಯ ವಕ್ತಾರರಾದ ಸೌ. ಭವ್ಯ ಗೌಡ ಇವರು ಮಾತನಾಡುತ್ತ ಹುಬ್ಬಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆದ ಪ್ರಕರಣಗಳನ್ನು ಉಲ್ಲೇಖಿಸಿ ಮಹಿಳೆಯರ ಸುರಕ್ಷತೆ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ, ಪೋಷಕರು ತಮ್ಮ ಮಕ್ಕಳ ಸ್ನೇಹ, ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಸಂಪರ್ಕಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಂತಹ ಪ್ರಕರಣಗಳ ವಿರುದ್ಧ ಮಹಿಳಾ ಆಯೋಗ ಹಾಗೂ ಸಂಬಂಧಿತ ಆಡಳಿತ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮಕ್ಕಳಲ್ಲಿ ಹಿಂದೂ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯನ್ನೂ ವಿವರಿಸಿದರು.

ಆನಂತರ ಮಾತನಾಡಿದ ಡಾ. ರೂಪರವರು ಇಂದು ಕಚೇರಿಗಳಲ್ಲಿ ಉದ್ಯೋಗಿಗಳ ಮೇಲೆ ಪರೋಕ್ಷ ಧಾರ್ಮಿಕ ಒತ್ತಡ ಹೇರುವುದು, ಅನ್ಯ ಧರ್ಮದ ಆಚರಣೆಗಳನ್ನು ಅನುಸರಿಸಲು ಪ್ರೇರೇಪಿಸುವುದು, ನಮಾಜ್ ಅಥವಾ ಇತರ ಆಚರಣೆಗಳಿಗೆ ಒತ್ತಾಯಿಸುವ ಘಟನೆಗಳು ನಡೆಯುತ್ತಿವೆ, ಇದೇ ವೇಳೆ ಹಿಂದೂ ದೇವತೆಗಳ ಅಪಹಾಸ್ಯ, ಹಿಂದೂ ಗುರುಗಳ ವಿರುದ್ಧ ನಕಾರಾತ್ಮಕ ಟೀಕೆ ಹಾಗೂ ಧಾರ್ಮಿಕ ಸಂಸ್ಕೃತಿಯ ಅವಮಾನ ಕಾರ್ಪೊರೇಟ್ ವಾತಾವರಣದಲ್ಲಿ ಹೆಚ್ಚುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಉದ್ಯೋಗಿಗಳು ಇಂತಹ ಧಾರ್ಮಿಕ ಕಿರುಕುಳ ಅಥವಾ ತಾರತಮ್ಯಗಳನ್ನು ಸುರಕ್ಷಿತವಾಗಿ ವರದಿ ಮಾಡಲು ಪ್ರತ್ಯೇಕ ಹೆಲ್ಪ್‌ಲೈನ್ ಅಥವಾ ದೂರು ವ್ಯವಸ್ಥೆ ಅಗತ್ಯವಿದೆ ಎಂದರು.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು