‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಮನವಿ ಬಳಿಕ ಆಡಳಿತ ಮಂಡಳಿಗೆ ಮುಖ್ಯಮಂತ್ರಿಗಳ ನಿರ್ದೇಶನ!

ಮುಂಬಯಿ, ಮೇ 15 (ವಾರ್ತೆ) – ರಾಜ್ಯದ ಕಂದಾಯ ಇಲಾಖೆಯು ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಕರಡನ್ನು ಪ್ರಕಟಿಸಿದ್ದು, ಈ ಬಗ್ಗೆ ಸೂಚನೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಕಂದಾಯ ಸಚಿವ ಚಂದ್ರಶೇಖರ್ ಬಾವನಕುಳೆ ಅವರು ಮುಂಬರುವ ಅಧಿವೇಶನದಲ್ಲಿ ಈ ಕಾಯ್ದೆಯನ್ನು ತರುವುದಾಗಿ ಹೇಳಿಕೆ ನೀಡಿದ್ದಾರೆ; ಆದರೆ ಈ ಅಧಿನಿಯಮದ ಬಗ್ಗೆ ರಾಜ್ಯದ ಮಂದಿರಗಳ ವಿಶ್ವಸ್ತರಲ್ಲಿ ಅಸಮಾಧಾನವಿದೆ. ‘ದೇವಸ್ಥಾನಗಳ ಇನಾಮ್ ಭೂಮಿಯನ್ನು ಮಾರಾಟ ಮಾಡಬಾರದು’ ಎಂಬುದು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ನಿಲುುವಾಗಿದೆ.
ಈ ಕುರಿತು ಮಹಾಸಂಘದ ರಾಷ್ಟ್ರೀಯ ಸಮನ್ವಯಕರಾದ ಶ್ರೀ ಸುನೀಲ್ ಘನವಟ್ ಅವರು ಮೇ 14 ರಂದು ಮಂತ್ರಾಲಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮಂದಿರಗಳ ವಿಶ್ವಸ್ತರ ನಿಲುುವನ್ನು ಮಂಡಿಸಿದರು. ಇದರ ಬೆನ್ನಲ್ಲೇ, ಕಂದಾಯ ಸಚಿವರ ಸಮ್ಮುಖದಲ್ಲಿ ರಾಜ್ಯದ ಮಂದಿರಗಳ ವಿಶ್ವಸ್ತರ ಸಭೆ ನಡೆಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.
महाराष्ट्रात प्रस्तावित असलेला 'महाराष्ट्र देवस्थान इनाम निर्मूलन प्रारूप अधिनियम २०२६' हा कायदा मंदिरांच्या जमिनी व व्यवस्थापनासाठी अडचणीचा ठरणारा आहे. या कायद्याला राज्यातील लाखो मंदिर विश्वस्तांचा तीव्र विरोध आहे. या संदर्भात महाराष्ट्र मंदिर महासंघाचे राष्ट्रीय संघटक श्री… pic.twitter.com/1idtkfyxR1
— Sunil Ghanwat 🛕🛕 (@SG_HJS) May 15, 2026

‘ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಪ್ರಸ್ತಾವಿತ ಕಾಯ್ದೆಯನ್ನು ರದ್ದುಗೊಳಿಸಿ! – ಉಪಮುಖ್ಯಮಂತ್ರಿಗಳಿಗೆ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಬೇಡಿಕೆ!
‘ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಪ್ರಸ್ತಾವಿತ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ರಾಷ್ಟ್ರೀಯ ಸಮನ್ವಯಕರಾದ ಶ್ರೀ ಸುನೀಲ್ ಘನವಟ್ ಅವರು ಮೇ 14 ರಂದು ಸಚಿವಾಲಯದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಉಪಮುಖ್ಯಮಂತ್ರಿಗಳೂ ಕೂಡ ಕಂದಾಯ ಸಚಿವರೊಂದಿಗೆ ಸಭೆ ಆಯೋಜಿಸುವಂತೆ ನಿರ್ದೇಶನ ನೀಡಿದ್ದಾರೆ.
ಮಂದಿರ ವಿಶ್ವಸ್ತರ ನಿಲುುವನ್ನು ಅರ್ಥಮಾಡಿಕೊಳ್ಳುತ್ತೇವೆ! – ಕಂದಾಯ ಸಚಿವರು
ರಾಜ್ಯದ ಕಂದಾಯ ಇಲಾಖೆಯು ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಕರಡನ್ನು ಪ್ರಕಟಿಸಿದ್ದು, ಜೂನ್ 5 ರವರೆಗೆ ಸೂಚನೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಕಾಯ್ದೆಯ ಮೂಲಕ ಮಂದಿರಗಳ ಭೂಮಿಯನ್ನು ಮಾರಾಟ ಮಾಡಬಹುದಾಗಿರುವುದರಿಂದ ರಾಜ್ಯದ ಮಂದಿರಗಳ ವಿಶ್ವಸ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಆದ್ದರಿಂದ, ಸರಕಾರವು ಮಂದಿರ ವಿಶ್ವಸ್ತರ ನಿಲುುವನ್ನು ತಿಳಿದುಕೊಳ್ಳಬೇಕೆಂದು ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಪರವಾಗಿ ರಾಷ್ಟ್ರೀಯ ಸಮನ್ವಯಕರಾದ ಶ್ರೀ. ಸುನೀಲ್ ಘನವಟ್ ಅವರು ಕಂದಾಯ ಸಚಿವ ಚಂದ್ರಶೇಖರ್ ಬಾವನಕುಳೆ ಅವರಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು, ಮೇ 21 ರಂದು ರಾಜ್ಯದ ಮಂದಿರಗಳ ವಿಶ್ವಸ್ತರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಮೇ 14 ರಂದು ಸುನೀಲ್ ಘನವಟ್ ಅವರು ಸಚಿವಾಲಯದಲ್ಲಿ ಚಂದ್ರಶೇಖರ್ ಬಾವನಕುಳೆ ಅವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಮಂಡಿಸಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ