
ಹರಿದ್ವಾರ (ಉತ್ತರಾಖಂಡ) – ಇಲ್ಲಿನ ನಿಷೇಧಿತ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಮಾಂಸಾಹಾರವನ್ನು ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಪಾಲಿಕೆ ಆಡಳಿತವು ‘ರ‍್ಯಾಪಿಡೋ’ ಆನ್‌ಲೈನ್ ವಿತರಣಾ ಸಂಸ್ಥೆಗೆ ಇ-ಮೇಲ್ ಮೂಲಕ ಖಡಕ್ ಎಚ್ಚರಿಕೆ ನೀಡಿದೆ. ನಿಷೇಧಿತ ಪ್ರದೇಶದಲ್ಲಿ ಇಂತಹ ವಸ್ತುಗಳನ್ನು ವಿತರಿಸಬಾರದು ಮತ್ತು ತಮ್ಮ ಉದ್ಯೋಗಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಬೇಕೆಂದು ಸಂಸ್ಥೆಗೆ ಸೂಚಿಸಲಾಗಿದೆ. ಹರಿದ್ವಾರವು ಮಾಂಸ ಮತ್ತು ಮದ್ಯ ನಿಷೇಧಿತ ಪ್ರದೇಶವಾಗಿದ್ದರೂ ಸಹ, ಕೆಲವು ಆನ್‌ಲೈನ್ ವಿತರಣಾ ಸಂಸ್ಥೆಗಳು ಇಲ್ಲಿ ಮಾಂಸಾಹಾರವನ್ನು ತಲುಪಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಿಂದೂತ್ವನಿಷ್ಠ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಪತ್ನಿಯ ಭಾವಚಿತ್ರದ ಮೇಲೆ ಉಗುಳಿ ಗಂಗಾನದಿಯಲ್ಲಿ ವಿಸರ್ಜಿನೆ !
ಹರಿದ್ವಾರದ ಜಗತ್ಪ್ರಸಿದ್ಧ ಹರ್ ಕಿ ಪೈಡಿಯಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಭಾವಚಿತ್ರದ ಮೇಲೆ ಉಗುಳಿ, ಅದನ್ನು ಗಂಗಾನದಿಯಲ್ಲಿ ಹರಿಬಿಡುತ್ತಿರುವುದು ಕಂಡುಬಂದಿದೆ. ತನ್ನ ಪತ್ನಿಯ ‘ರೀಲ್ಸ್’ (ಸಾಮಾಜಿಕ ಮಾಧ್ಯಮಗಳ ವಿಡಿಯೋ) ಮಾಡುವ ಹವ್ಯಾಸದಿಂದ ಬೇಸತ್ತಿದ್ದ ಈ ವ್ಯಕ್ತಿ, ಕೋಪದಲ್ಲಿ ಜೀವಂತ ಪತ್ನಿಗೇ ‘ಪಿಂಡದಾನ’ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ನಾಯಿಯನ್ನು ಗಂಗಾನದಿಯಲ್ಲಿ ಸ್ನಾನ ಮಾಡಿಸಿದ ಘಟನೆ!
ಕೆಲವು ದಿನಗಳ ಹಿಂದಷ್ಟೇ ಮಹಿಳೆಯೊಬ್ಬಳು ನಾಯಿಯನ್ನು ಗಂಗೆಯಲ್ಲಿ ಸ್ನಾನ ಮಾಡಿಸಿದ್ದರಿಂದ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಪ್ರಸ್ತುತ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ತೀರ್ಥ ಪುರೋಹಿತರು ಮತ್ತು ಹಿಂದೂತ್ವನಿಷ್ಠ ಸಂಘಟನೆಗಳಲ್ಲಿ ಆಕ್ರೋಶ ವ್ಯಕ್ತವಾಗಿವೆ. ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಗಂಗಾನದಿಯ ಬಗ್ಗೆ ಕೋಟ್ಯಂತರ ಜನರ ಶ್ರದ್ಧೆ-ಭಕ್ತಿಯಿದೆ; ಆದರೆ ಪದೇ-ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಯುವತಿಯರು ಸಿನಿಮಾದ ಹಾಡುಗಳಿಗೆ ನೃತ್ಯ ಮಾಡುವುದು, ಇನ್ನು ಕೆಲವೊಮ್ಮೆ ಯುವಕರು ಗಂಗಾ ನದಿಯ ದಡದಲ್ಲಿ ಮದ್ಯಪಾನ ಮಾಡುವ ವಿಡಿಯೋಗಳು ಕೂಡ ಪ್ರಸಾರವಾಗುತ್ತಿವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ