ದೆಹಲಿಯಲ್ಲಿ ಬಸ್ಸಿನಲ್ಲಿ ನಡೆದ ಅತ್ಯಾಚಾರ ಪ್ರಕರಣ

ನವದೆಹಲಿ – ಇಲ್ಲಿ ಮೇ 11 ರ ರಾತ್ರಿ ಚಲಿಸುತ್ತಿದ್ದ ಸ್ಲೀಪರ್ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದರು. ಆ ಬಸ್ ಬಿಹಾರದ್ದಾಗಿದೆ ಮತ್ತು ಆ ಬಸ್ಸಿನ ಪರವಾನಗಿಯು ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಇದ್ದರೂ, ಅದನ್ನು ಅಕ್ರಮವಾಗಿ ಪ್ರಯಾಣಿಕರ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬುದು ಪೊಲೀಸರು ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ಈ ಬಸ್ ದೆಹಲಿಯಿಂದ ಬಿಹಾರ ಮಾರ್ಗದಲ್ಲಿ ಸಂಚರಿಸುತ್ತದೆ.
ಬಸ್ಸಿನ ಪರದೆಗಳನ್ನು ಹಾಕಿದ್ದರಿಂದ ಯಾರಿಗೂ ಸುಳಿವು ಸಿಗಲಿಲ್ಲ!
ಪ್ರಾಥಮಿಕ ತನಿಖೆಯಲ್ಲಿ, ಬಸ್ಸಿನ ಪರದೆಗಳನ್ನು ಹಾಕಲಾಗಿತ್ತು. ಇದರಿಂದಾಗಿ ಹೊರಗಿನಿಂದ ಏನೂ ಕಾಣಿಸುತ್ತಿರಲಿಲ್ಲ. ಈ ಬಸ್ ಹವಾನಿಯಂತ್ರಿತವಾಗಿದ್ದರಿಂದ ಅದರ ಕಿಟಕಿ ಗಾಜುಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸಂತ್ರಸ್ತೆಯ ಚೀರಾಟ ಹೊರಗೆ ಕೇಳಿಸಲಿಲ್ಲ ಮತ್ತು ಪರದೆಗಳನ್ನು ಹಾಕಿದ್ದರಿಂದ ರಸ್ತೆಯಲ್ಲಿ ಓಡಾಡುವ ಇತರ ಜನರಿಗೂ ಘಟನೆಯ ಬಗ್ಗೆ ಅರಿವಾಗಲಿಲ್ಲ ಎಂಬುದು ತಿಳಿದುಬಂದಿದೆ. ಬಸ್ಸಿನಿಂದ ಪುರಾವೆಗಳನ್ನು ಸಂಗ್ರಹಿಸಲು ನ್ಯಾಯವೈದ್ಯಕೀಯ ತಂಡವನ್ನು (ಫೊರೆನ್ಸಿಕ್ ಟೀಮ್) ಕರೆಯಿಸಲಾಗಿದೆ.
ಬಸ್ಸಿನ ಮೇಲೆ ಈ ಹಿಂದೆಯೂ ಸಂಚಾರ ನಿಯಮ ಉಲ್ಲಂಘಿಸಿದ ಹಲವು ಪ್ರಕರಣಗಳು!
ತನಿಖೆಯಲ್ಲಿ, ಅಪರಾಧಕ್ಕೆ ಬಳಸಲಾದ ಬಸ್ ಗೋಪಾಲ್ ಗಂಜ್ ಜಿಲ್ಲೆಯ ಸಾಯಿ ದೃಷ್ಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಬಸ್ಸಿನ ಮೇಲೆ 10 ಲಕ್ಷ ರೂಪಾಯಿಗೂ ಹೆಚ್ಚು ದಂಡವಿದೆ. 2024 ರಲ್ಲಿ ಇದನ್ನು ನೋಂದಾಯಿಸಲಾಗಿತ್ತು. ಬಸ್ಸಿನ ಮಾಲೀಕನ ಹೆಸರು ಹ್ಯಾಪಿ ಮಲ್ಹೋತ್ರಾ ಆಗಿದ್ದು, ಆತ ಗೋಪಾಲ್ ಗಂಜ್ ಜಿಲ್ಲೆಯ ರಾಮಪುರ್ ಸದೌವಾ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ಬಸ್ಸಿನ ಮೇಲೆ ಈ ಹಿಂದೆಯೂ ಸಂಚಾರ ನಿಯಮಗಳ ಉಲ್ಲಂಘನೆಯ 12 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ವಿಮೆಯ ಕೊರತೆ, ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಭದ್ರತಾ ಮಾನದಂಡಗಳನ್ನು ನಿರ್ಲಕ್ಷಿಸುವುದು ಸೇರಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ