ಸನಾತನವನ್ನು ಮುಗಿಸುವ ಹೇಳಿಕೆಯ ಮೇಲೆ ದೇಶಾದ್ಯಂತ ಟೀಕೆಯಾದ ನಂತರ ಉದಯನಿಧಿ ಸ್ಟಾಲಿನ್ ಅವರ ಹಾಸ್ಯಾಸ್ಪದ ಸ್ಪಷ್ಟೀಕರಣ !

ಚೆನ್ನೈ (ತಮಿಳುನಾಡು) – ನನ್ನ ಹೇಳಿಕೆಯ ತಪ್ಪಾದ ಅರ್ಥ ಕಲ್ಪಿಸಲಾಗುತ್ತಿದೆ. ನಾನು ಜನರು ದೇವಸ್ಥಾನಕ್ಕೆ ಹೋಗುವುದರ ವಿರುದ್ಧವಲ್ಲ, ಕೇವಲ ಅಲ್ಲಿ ಜಾತಿಯ ಆಧಾರದ ಮೇಲೆ ನಡೆಯುವ ತಾರತಮ್ಯದ ವಿರುದ್ಧವಾಗಿದ್ದೇನೆ. ಆ ವಿಚಾರಧಾರೆಯನ್ನು ಮುಗಿಸಬೇಕು, ಎಂಬ ಸ್ಪಷ್ಟೀಕರಣವನ್ನು ಡಿಎಂಕೆ ನಾಯಕ ಮತ್ತು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ತಾರತಮ್ಯ ಮಾಡುವ ಸನಾತನವನ್ನು ಮುಗಿಸಬೇಕು ಎಂದು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯ ಮೇಲೆ ನೀಡಿದ್ದಾರೆ. ಈ ಹೇಳಿಕೆಯಿಂದ ಅವರ ಮೇಲೆ ದೇಶಾದ್ಯಂತ ಟೀಕೆಯಾಗಿತ್ತು.
ಉದಯನಿಧಿಯವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ,
1. ತಮಿಳುನಾಡು ವಿಧಾನಸಭೆಯಲ್ಲಿ ನಾನು ಜನರನ್ನು ವಿಭಜಿಸುವ ಸನಾತನದ ಅಂತ್ಯವಾಗಬೇಕು ಎಂದು ಹೇಳಿದಾಗ ಕೆಲವು ಜನರು ನನ್ನನ್ನು ಟೀಕಿಸುತ್ತಿದ್ದಾರೆ; ಆದರೆ ನಾನು ಇಂತಹ ಟೀಕೆಗಳಿಗೆ ಹೆದರುವುದಿಲ್ಲ.
2. ದ್ರಾವಿಡ ಚಳುವಳಿಯು ಯಾವಾಗಲೂ ವಿರೋಧದಿಂದಲೇ ಮುಂದೆ ಸಾಗಿದೆ; ಆದ್ದರಿಂದ ನಾನು ಕೇವಲ ಒಂದು ಸಣ್ಣ ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಸನಾತನದ ಅಂತ್ಯವಾಗಬೇಕು ಎಂದು ಹೇಳಿದಾಗ, ಅದರ ಅರ್ಥ ಯಾರೂ ದೇವಸ್ಥಾನಕ್ಕೆ ಹೋಗಬಾರದು ಎಂದಲ್ಲ. ಅದರ ಅರ್ಥವೇನೆಂದರೆ, ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ, ಸಮಾಜದಲ್ಲಿಯೂ ಎಲ್ಲಾ ಜನರಿಗೆ ಸಮಾನ ಹಕ್ಕುಗಳು ಸಿಗಬೇಕು. ಜನರನ್ನು ಮೇಲು ಮತ್ತು ಕೀಳು ಜಾತಿಗಳಾಗಿ ವಿಭಜಿಸುವ ಆ ವಿಚಾರಧಾರೆಯ ಅಂತ್ಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಪೆರಿಯಾರ್, ಅಂಬೇಡ್ಕರ್, ಅಣ್ಣಾ ಮತ್ತು ಕರುಣಾನಿಧಿ ಅವರು ಚರ್ಚಿಸಿದ ಅದೇ ವಿಚಾರಗಳನ್ನು ನಾನು ಮಂಡಿಸುತ್ತಿದ್ದೇನೆ. ನಾವು ಯಾರದೇ ದೇವರ ಮೇಲಿನ ನಂಬಿಕೆಯ ವಿರುದ್ಧವಲ್ಲ; ಆದರೆ ಅಸಮಾನತೆ ಮತ್ತು ಶೋಷಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ