ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮುಳ್ಳುತಂತಿಯ ಬೇಲಿ; ಬಾಂಗ್ಲಾ ಮತಾಂಧ ಮುಸ್ಲಿಮರ ಆಕ್ರೋಶ

ಢಾಕಾ (ಬಾಂಗ್ಲಾದೇಶ) – “ಬಂಗಾಳದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲದಿದ್ದರೆ, ಬಾಂಗ್ಲಾದೇಶದಲ್ಲೂ ಹಿಂದೂಗಳನ್ನು ಸುರಕ್ಷಿತವಾಗಿರಲು ಬಿಡುವುದಿಲ್ಲ,” ಎಂದು ಬಾಂಗ್ಲಾದೇಶದ ಮೌಲಾನಾ ಇನಾಯತುಲ್ಲಾ ಅಬ್ಬಾಸಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ತಾರಿಕ್ ರೆಹಮಾನ್ ಸರಕಾರಕ್ಕೆ ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಪ್ರಚೋದನೆ ನೀಡಿದ್ದಾನೆ. ಬಂಗಾಳದ ಮುಖ್ಯಮಂತ್ರಿ ಸುಭೇಂದು ಅಧಿಕಾರಿ ಅವರು ಗಡಿಯಲ್ಲಿ ಮುಳ್ಳುತಂತಿಯ ಬೇಲಿ ಹಾಕಲು ಗಡಿ ಭದ್ರತಾ ಪಡೆಗೆ (BSF) ಭೂಮಿ ಹಸ್ತಾಂತರಿಸುವಂತೆ ಆದೇಶ ನೀಡಿದ ನಂತರ, ಬಾಂಗ್ಲಾದೇಶದ ಮತಾಂಧರು ಕೆರಳಿದ್ದು ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ.
‘ಮುಳ್ಳುತಂತಿಯ ಬೇಲಿಗಳಿಂದ ಬಾಂಗ್ಲಾದೇಶವನ್ನು ಹೆದರಿಸಲು ಸಾಧ್ಯವಿಲ್ಲ!’

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹುಮಾಯೂನ್ ಕಬೀರ್ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, “ಬಾಂಗ್ಲಾದೇಶವನ್ನು ಮುಳ್ಳುತಂತಿಯ ಬೇಲಿಗಳಿಂದ ಹೆದರಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
ಭಾರತದ 40 ಕೋಟಿ ಮುಸ್ಲಿಮರು ಸಿಟ್ಟಿಗೆದ್ದರೆ ಹಿಂದೂಗಳು ಬದುಕುವುದಿಲ್ಲ!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಬಾಂಗ್ಲಾದೇಶದ ‘ಇನ್ಸಾಫ್ ಕಾಯಂಕಾರಿ ಛಾತ್ರ ಶ್ರಮಿಕ ಜನತಾ’ ಎಂಬ ಉಗ್ರಗಾಮಿ ಸಂಘಟನೆಯ ಮೌಲಾನಾ ಒಬ್ಬನು ಹಿಂದೂ ದ್ವೇಷವನ್ನು ಕಾರುತ್ತಾ, “ಭಾರತದ 40 ಕೋಟಿ ಮುಸ್ಲಿಮರು ಸಿಟ್ಟಿಗೆದ್ದರೆ ಹಿಂದೂಗಳು ಉಳಿಯುವುದಿಲ್ಲ,” ಎಂದು ಹೇಳಿದ್ದಾನೆ. ಅಲ್ಲದೆ, “ಪಾಕಿಸ್ತಾನದ ಸಹಾಯದಿಂದ ಭಾರತದ ಮೇಲೆ ದಾಳಿ ಮಾಡುವುದು” ಮತ್ತು “ಮೂರು ಗಂಟೆಗಳಲ್ಲಿ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು” ಎಂಬಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾನೆ. ಆತ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಂಗಾಳದ ಮುಖ್ಯಮಂತ್ರಿ ಸುಭೇಂದು ಅಧಿಕಾರಿ ಅವರ ಹೆಸರನ್ನು ಹೇಳಿ ಬೆದರಿಕೆ ಹಾಕಿದ್ದಾನೆ.
ಸುಭೇಂದು ಅಧಿಕಾರಿ ಅವರನ್ನು ಗಡಿಯಲ್ಲೇ ಹೂತು ಹಾಕುವ ಬೆದರಿಕೆ
ಇನ್ನೊಂದು ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಬಂಗಾಳದ ನೂತನ ಮುಖ್ಯಮಂತ್ರಿ ಸುಭೇಂದು ಅಧಿಕಾರಿ ಅವರನ್ನು ಗಡಿಯಲ್ಲೇ ಹೂತು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈ ವಿಡಿಯೋ ‘ದ ಇಂಕ್ಲಾಬ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರವಾಗಿದೆ. ಪೊಲೀಸರು ಸದ್ಯ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !