ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಲೋಧಿ ಅವರಿಂದ ಪ್ರಧಾನಿ ಮೋದಿಗೆ ಬೈಗುಳ
ಅಜೇಂದ್ರ ಲೋಧಿ ವಿರುದ್ಧ ದೂರು ದಾಖಲು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಮೀರ್‌ಪುರದ ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಲೋಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿರುವ ವಿಡಿಯೋವೊಂದು ಪ್ರಸಾರವಾಗಿದೆ. ಪ್ರಧಾನಿ ಮೋದಿಯವರು ಒಂದು ವರ್ಷ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದಾರೆ ಮತ್ತು ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹೇಳಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, ಅದಕ್ಕೆ ಉತ್ತರಿಸಿದ ಅಜೇಂದ್ರ ಲೋಧಿ ಪ್ರಧಾನಿಯನ್ನು ‘ಹರಾಮಿ’ ಮತ್ತು ‘ದೇಶವಿರೋಧಿ’ ಎಂದು ಕರೆದಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಮಹೋಬಾದಲ್ಲಿ ಭಾಜಪ ನಾಯಕ ಸತ್ಯೇಂದ್ರ ಪ್ರತಾಪ್ ಗುಪ್ತಾ ಅವರು ದೂರು ದಾಖಲಿಸಿದ್ದಾರೆ.
🚨 Mahoba, Uttar Pradesh:
“Never seen such a b****§¢§ and anti-national Prime Minister”!⚠️ Abusive remarks against Prime Minister Narendra Modi by Samajwadi Party leader Ajendra Lodhi.
📢 Complaint has been lodged against Ajendra Lodhi.
❓While opposing the Prime Minister,… pic.twitter.com/8FteBbGcM1
— Sanatan Prabhat (@SanatanPrabhat) May 14, 2026
1. ವಿಡಿಯೋದಲ್ಲಿ ಸಮಾಜವಾದಿ ಪಕ್ಷದ ಸಂಸದ ಮೊದಲು ವ್ಯಂಗ್ಯವಾಡುತ್ತಾ, ಮೋದಿಜಿ ಏನೇ ಮಾತನಾಡಿದರೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿ; ಆದರೆ ಸ್ವತಃ ವಿದೇಶ ಪ್ರವಾಸ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ ಎಂದಿದ್ದಾರೆ.
2. ಆನಂತರ ನಿಂದಿಸುತ್ತಾ ಅಜೇಂದ್ರ ಲೋಧಿ, ಇಷ್ಟೊಂದು ಹರಾಮಿ ಮತ್ತು ದೇಶವಿರೋಧಿ ಪ್ರಧಾನಿಯನ್ನು ಇದುವರೆಗೂ ಯಾರೂ ನೋಡಿಲ್ಲ ಮತ್ತು ಮುಂಬರುವ ಸರಕಾರಗಳಲ್ಲೂ ಇಂತಹ ಪ್ರಧಾನಿ ನೋಡಲು ಸಿಗುವುದಿಲ್ಲ ಎಂದಿದ್ದಾರೆ.
ಸಮಯ ಬಂದಾಗ ಜನತೆ ಉತ್ತರಿಸುತ್ತಾರೆ ! – ಯೋಗಿ ಆದಿತ್ಯನಾಥ್
ಈ ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಜಗತ್ತಿನ ಅತ್ಯಂತ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಂಸದರೊಬ್ಬರು ಮಾಡಿದ ಅಸಂಸದೀಯ ಟೀಕೆಯು ಅಶೋಭನೀಯ ಮತ್ತು ಅಕ್ಷಮ್ಯವಷ್ಟೇ ಅಲ್ಲ, ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು ಭಾರತೀಯ ಪ್ರಜಾಪ್ರಭುತ್ವದ ಮಿತಿಗಳ ಮೇಲೆಯೂ ಗಂಭೀರ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕೃತ್ಯವು ರಾಜಕೀಯ ಕುಸಂಸ್ಕಾರ, ವೈಚಾರಿಕ ದಿವಾಳಿತನ ಮತ್ತು ಸಾರ್ವಜನಿಕ ಜೀವನದಲ್ಲಿನ ಸಭ್ಯತೆಯ ಮೇಲಿನ ಅಗೌರವವನ್ನು ಪ್ರಕಟಿಸುತ್ತದೆ. ಇದು 145 ಕೋಟಿ ದೇಶವಾಸಿಗಳ ಜನಾದೇಶದ, ವಿಶ್ವಾಸದ ಮತ್ತು ಭಾರತದ ಪ್ರಜಾಪ್ರಭುತ್ವದ ಘನತೆಯ ಅವಮಾನವೂ ಆಗಿದೆ. ದೇಶದ ಜನತೆ ಇಂತಹ ಮಿತಿಮೀರಿದ ವರ್ತನೆಗೆ ಸಮಯ ಬಂದಾಗ ಖಂಡಿತವಾಗಿಯೂ ತಕ್ಕ ಉತ್ತರ ನೀಡಲಿದ್ದಾರೆ, ಎಂದು ಹೇಳಿದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್