
ತುಮಕೂರು – ಇಲ್ಲಿನ ಮದರಸಾವೊಂದರಲ್ಲಿ ಮೌಲ್ವಿಯ ನಿರಂತರ ಕಿರುಕುಳಕ್ಕೆ ಬೇಸತ್ತು ಅಲ್ಲಿಂದ ಓಡಿಬಂದಿದ್ದ 24 ಮುಸ್ಲಿಂ ಮಕ್ಕಳು ಬೆಂಗಳೂರು ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಬಿಹಾರದಿಂದ ಈ ಮಕ್ಕಳು ತುಮಕೂರಿನ ಅಮಲಾಪುರದಲ್ಲಿರುವ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್ ಮದರಸಾದಲ್ಲಿ ಕಲಿಯಲು ಬಂದಿದ್ದರು. ಮೌಲ್ವಿಯ ವಿರುದ್ಧ ಬಾಲ ನ್ಯಾಯ ಕಾಯ್ದೆ ಮತ್ತು ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಮಕ್ಕಳನ್ನು ಕಂಡು ರೈಲ್ವೆ ಭದ್ರತಾ ಪಡೆ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಮದರಸಾದ ಮೌಲ್ವಿ ಎಷ್ಟು ಕ್ರೂರವಾಗಿದ್ದನೆಂದರೆ, ಆತ ಕಲಿಯಲು ಬಂದ ಮಕ್ಕಳಿಂದ ಕಲ್ಲು ಹೊರುವ ಕೆಲಸ ಮಾಡಿಸುತ್ತಿದ್ದ ಎಂದು ಮಕ್ಕಳು ಆರೋಪಿಸಿದ್ದಾರೆ. ಪ್ರತಿದಿನ ಕಲ್ಲು ಮತ್ತು ಮಣ್ಣನ್ನು ಹೊರಲು ಹಚ್ಚಲಾಗುತ್ತಿತ್ತು. ಕೆಲಸ ಮಾಡಲು ನಿರಾಕರಿಸಿದರೆ ಮೌಲ್ವಿ ಅವರಿಗೆ ಮನಬಂದಂತೆ ಥಳಿಸಿ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಮಕ್ಕಳಿಗೆ ಸರಿಯಾಗಿ ಊಟವನ್ನೂ ನೀಡುತ್ತಿರಲಿಲ್ಲ ಎಂಬ ಆರೋಪವೂ ಇದೆ. ದೈಹಿಕ ದೌರ್ಜನ್ಯ, ಕಿರುಕುಳ ಮತ್ತು ಬಲವಂತದ ದುಡಿಮೆಗೆ ಬೇಸತ್ತು ಕೊನೆಗೆ ಈ ಮಕ್ಕಳು ಅಲ್ಲಿಂದ ಓಡಿಬಂದಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”