ಗಡಿಯಲ್ಲಿ ಬೇಲಿ ಹಾಕಲು ಗಡಿ ಭದ್ರತಾ ಪಡೆಗೆ ಭೂಮಿ ನೀಡಲಾಗುವುದು

  • ಬಂಗಾಳದ ನೂತನ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಸಚಿವ ಸಂಪುಟದ ಮೊದಲ ಸಭೆಯಲ್ಲಿ ೫ ದೊಡ್ಡ ನಿರ್ಣಯಗಳು

  • ‘ಆಯುಷ್ಮಾನ್ ಭಾರತ್ ಯೋಜನೆ’ ಜಾರಿಗೆ ಬರಲಿದೆ

  • ಭಾಜಪದ ಹುತಾತ್ಮ ೩೨೧ ಕಾರ್ಯಕರ್ತರ ಕುಟುಂಬಗಳ ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳಲಾಗುವುದು

  • ‘ಭಾರತೀಯ ನ್ಯಾಯ ಸಂಹಿತೆ’ ಜಾರಿಯಾಗಲಿದೆ

ಕೋಲಕಾತಾ (ಬಂಗಾಳ) – ಬಂಗಾಳದ ನೂತನ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಮೇ ೧೧ ರಂದು ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಇದರಲ್ಲಿ ೫ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ಸಂಪೂರ್ಣ ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್ ಯೋಜನೆ’ (ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ವರ್ಷ ೫ ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ) ಜಾರಿಗೊಳಿಸಲಾಗುವುದು. ನಿಯಮಗಳ ಪ್ರಕಾರ ಐ.ಪಿ.ಎಸ್. (ಇಂಡಿಯನ್ ಪೊಲೀಸ್ ಸರ್ವಿಸ್ – ಭಾರತೀಯ ಪೊಲೀಸ್ ಸೇವೆ) ಮತ್ತು ಐ.ಎ.ಎಸ್. (ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ – ಭಾರತೀಯ ಆಡಳಿತ ಸೇವೆ) ಅಧಿಕಾರಿಗಳಿಗೆ ಕೇಂದ್ರ ತರಬೇತಿಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗುವುದು. ರಾಜ್ಯದಲ್ಲಿ ‘ಭಾರತೀಯ ನ್ಯಾಯ ಸಂಹಿತೆ’ ಜಾರಿಯಾಗಲಿದೆ. ಗಡಿ ಭದ್ರತಾ ಪಡೆಗೆ ಗಡಿಭಾಗದ ಭೂಮಿಯನ್ನು ಹಸ್ತಾಂತರಿಸಲಾಗುವುದು. ೪೫ ದಿನಗಳ ಒಳಗೆ ಈ ಭೂಮಿಯನ್ನು ನೀಡಲಾಗುವುದು. ಇದರ ಮೂಲಕ ಗಡಿಯಲ್ಲಿ ಬೇಲಿ ಹಾಕುವ ಕೆಲಸವಾಗಲಿದೆ. ಬಂಗಾಳದಲ್ಲಿ ಜೀವ ಕಳೆದುಕೊಂಡ ೩೨೧ ಭಾಜಪ ಕಾರ್ಯಕರ್ತರ ಕುಟುಂಬಗಳ ಸಂಪೂರ್ಣ ಹೊಣೆಗಾರಿಕೆಯನ್ನು ಸರಕಾರ ವಹಿಸಿಕೊಳ್ಳಲಿದೆ. (ಮಮತಾ ಬ್ಯಾನರ್ಜಿ ಸರಕಾರದ ಕಾಲದಲ್ಲಿ ೩೦೦ ಕ್ಕೂ ಹೆಚ್ಚು ಕಾರ್ಯಕರ್ತರ ರಾಜಕೀಯ ಹಿಂಸಾಚಾರದಲ್ಲಿ ಹತ್ಯೆಯಾಗಿದೆ ಎಂಬುದು ಭಾಜಪದ ದಾವೆ ಇದೆ) ಈ ೫ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು, ಬಂಗಾಳದ ಗಡಿ ಜಿಲ್ಲೆಗಳಲ್ಲಿ ಸತತವಾಗಿ ಬದಲಾಗುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟವು ಗಡಿಯಲ್ಲಿ ಬೇಲಿ ಹಾಕಲು ಗಡಿ ಭದ್ರತಾ ಪಡೆಗೆ ಅವಶ್ಯಕವಿರುವ ಭೂಮಿಯನ್ನು ಒಪ್ಪಿಸುವ ಪ್ರಕ್ರಿಯೆಗೆ ಒಪ್ಪಿಗೆ ನೀಡಿದೆ. ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯದ ಭೂಮಿ ಹಾಗೂ ಭೂ-ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಮುಂದಿನ ೪೫ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೇಳಲಾಗಿದೆ.

ಸಂಪಾದಕೀಯ ನಿಲುವು

  • ಗಡಿಯಲ್ಲಿ ಬೇಲಿ ಹಾಕಲು ಕೂಡ ಮಮತಾ ಬ್ಯಾನರ್ಜಿ ಸರಕಾರ ಭೂಮಿ ನೀಡಿರಲಿಲ್ಲ, ಇದರಿಂದ ಅವರ ದೇಶದ್ರೋಹಿ ಮತ್ತು ಬಾಂಗ್ಲಾದೇಶಿ ಮುಸಲ್ಮಾನಪ್ರೇಮಿ ಮಾನಸಿಕತೆಯ ತುತ್ತತುದಿ ಗಮನಕ್ಕೆ ಬರುತ್ತದೆ ! ಈ ಪ್ರಕರಣದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !
  • ಜನತೆಗೆ ಆರೋಗ್ಯ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್ ಯೋಜನೆಯನ್ನೂ ಜಾರಿಗೊಳಿಸದ ಮಮತಾ ಬ್ಯಾನರ್ಜಿ ಜನದ್ರೋಹಿಯೇ ಆಗಿದ್ದರು. ಅದಕ್ಕಾಗಿಯೇ ಬಂಗಾಳಿ ಜನತೆ ಅವರನ್ನು ಮನೆಗೆ ಕೂರಿಸಿದರು, ಎಂಬುದು ಗಮನಕ್ಕೆ ಬರುತ್ತದೆ !