
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡವು ಉತ್ತರ ಪ್ರದೇಶ ಮತ್ತು ಬಿಹಾರದಿಂದ ಈ ಮೂವರನ್ನು ಬಂಧಿಸಿದೆ. ಮೇ ೬ ರಂದು ರಾತ್ರಿ ಬಂಗಾಳದಲ್ಲಿ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಅಯೋಧ್ಯೆಯಿಂದ ರಾಜ್ ಸಿಂಗ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಯಿತು. ಈತ ಮೂಲತಃ ಉತ್ತರ ಪ್ರದೇಶದ ಬಲ್ಲಿಯಾ ನಿವಾಸಿಯಾಗಿದ್ದು, ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದನು. ಹಾಗೆಯೇ ಬಿಹಾರದ ಬಕ್ಸರ್‌ನಿಂದ ಮಯಾಂಕ್ ರಾಜ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ ಅವರನ್ನು ಬಂಧಿಸಲಾಗಿದೆ.
ಆನ್‌ಲೈನ್ ವ್ಯವಹಾರದಿಂದ ಬಹಿರಂಗ
ಹತ್ಯೆಗಾಗಿ ಬಳಸಲಾದ ನಾಲ್ಕು ಚಕ್ರದ ವಾಹನವು ಹಾವಡಾದ ಬಾಲಿ ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಆರೋಪಿಗಳು ನಗದು ಹಣದ ಬದಲಿಗೆ ಆನ್‌ಲೈನ್ ಮೂಲಕ ಟೋಲ್ ಹಣ ಪಾವತಿಸಿದ್ದರು. ಈ ಡಿಜಿಟಲ್ ವ್ಯವಹಾರದಿಂದಾಗಿ ಪೊಲೀಸರಿಗೆ ಆರೋಪಿಗಳ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳು ಲಭ್ಯವಾದವು. ಅದರ ಆಧಾರದ ಮೂಲಕ ಪೊಲೀಸರು ಅವರವರೆಗೆ ತಲುಪಲು ಯಶಸ್ವಿಯಾದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ