ಇಬ್ಬರು ಮುಸ್ಲಿಮರ ಬಂಧನ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲು ಮುಸ್ಲಿಂ ಮಹಿಳೆಯರ ಯತ್ನ

ನಾಗಾಂವ್ (ಅಸ್ಸಾಂ) – ಜಿಲ್ಲೆಯ ಸ್ಕ್ರ್ಯಾಪ್ (ಗುಜರಿ) ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ದೊಡ್ಡ ಗ್ಯಾಂಗ್‌ನ ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಗ್ಯಾಂಗ್‌ನಲ್ಲಿ ಹಮೀದ್ ಅಲಿ ಮತ್ತು ಆತನ ಮಗ ಅಜರ್ ಉದ್ದೀನ್ ಎಂಬವರು ಪ್ರಮುಖರಾಗಿದ್ದರು. ದೇವಸ್ಥಾನಗಳಿಂದ ಲೂಟಿ ಮಾಡಲಾದ ಹಿತ್ತಾಳೆಯ ಗಂಟೆಗಳು, ತ್ರಿಶೂಲಗಳು, ಮೂರ್ತಿಗಳು ಮತ್ತು ಇತರ ಅನೇಕ ಹಿಂದೂ ಪುರಾತನ ವಸ್ತುಗಳ ಚೀಲಗಳನ್ನು ಇವರಿಬ್ಬರ ಮಾಲೀಕತ್ವದ ಗೋದಾಮಿನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಈ ವಸ್ತುಗಳ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.
🚨 Assam Police raided the scrap unit of Hamid Ali and his son Azharuddin in Nagaon.
During the operation, idols, temple bells, trishuls (tridents), and other sacred Hindu objects worth crores of rupees allegedly stolen from temples were seized. 🛕🔔
Suspicion is mounting that… pic.twitter.com/zR7vmK2rkW
— Sanatan Prabhat (@SanatanPrabhat) May 10, 2026
೧. ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಾಗ, ಆರೋಪಿ ಹಮೀದ್ ಅಲಿ ‘ನಾನು ಅಧಿಕೃತ ವ್ಯವಹಾರ ಮಾಡುತ್ತಿದ್ದೇನೆ ಮತ್ತು ನಿಯಮಿತವಾಗಿ ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ಪಾವತಿಸುತ್ತಿದ್ದೇನೆ’ ಎಂದು ಹೇಳುತ್ತಾ ಗಲಾಟೆ ಮಾಡಲು ಪ್ರಯತ್ನಿಸಿದನು.
೨. ‘ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದು ಮತ್ತು ಪವಿತ್ರ ವಸ್ತುಗಳ ಲೂಟಿ ಮಾಡುವುದು ಕಾನೂನುಬದ್ಧ ವ್ಯವಹಾರವಾಗಲು ಸಾಧ್ಯವಿಲ್ಲ’ ಎಂದು ಪೊಲೀಸರು ಆತನಿಗೆ ಖಡಕ್ ಆಗಿ ತಿಳಿಸಿದರು.
೩. ಇದು ಕೇವಲ ಕಳ್ಳತನದ ಮಾಲಲ್ಲ, ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಸಂಘಟಿತ ಅಪರಾಧಿ ಗ್ಯಾಂಗ್‌ನ ಭಾಗವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
೪. ಪೊಲೀಸರು ಕ್ರಮ ಕೈಗೊಳ್ಳದಂತೆ ತಡೆಯಲು ಈ ಪ್ರದೇಶದ ಕೆಲವು ಮಹಿಳೆಯರು ಅಡ್ಡಿಪಡಿಸಿದರು; ಆದರೆ ಪೊಲೀಸರು ಈ ವಿರೋಧವನ್ನು ಲೆಕ್ಕಿಸದೆ ಜಪ್ತಿ ಪ್ರಕ್ರಿಯೆಯನ್ನು ಮುಂದುವರಿಸಿದರು.
೫. ಈ ಪ್ರಕರಣದಲ್ಲಿ ಹಮೀದ್ ಅಲಿ ಮತ್ತು ಅಜರ್ ಉದ್ದೀನ್ ಅವರನ್ನು ಬಂಧಿಸಲಾಗಿದ್ದು, ಈ ಕೃತ್ಯದ ಹಿಂದೆ ಇನ್ನು ಯಾರ್ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
೬. ಪೊಲೀಸ್ ದಾಳಿಯಿಂದಾಗಿ ಈ ಪ್ರದೇಶದಲ್ಲಿ ಸಂಚಲನ ಮೂಡಿದ್ದು, ದೇವಸ್ಥಾನಗಳ ಕಳ್ಳತನದ ಹಲವು ಪ್ರಕರಣಗಳು ಭೇದಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ