ಬಂಗಾಳ ಚುನಾವಣೆಯ ಕುರಿತು ರಾಜಕೀಯ ವಿಶ್ಲೇಷಕ ಪಿನಾಕಿ ಗಂಗೋಪಾಧ್ಯಾಯ ಅವರ ವಿಶ್ಲೇಷಣೆ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಅತ್ಯಂತ ಆಶ್ಚರ್ಯಕರವಾಗಿದೆ. ಇಲ್ಲಿನ ಜನರಲ್ಲಿ ಇಷ್ಟು ವರ್ಷಗಳ ಕಾಲ ಭಯ ಮನೆಮಾಡಿತ್ತು. ಭಾಜಪವು ಆ ಭಯವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಿದೆ. ಈ ಭಾಗಗಳಲ್ಲಿ ಹಿಂದೂ ಮತ ಬ್ಯಾಂಕ್ ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿದೆ. ವಿಶೇಷವಾಗಿ ಶೇ. ೫೦ ಕ್ಕಿಂತ ಹೆಚ್ಚು ಮುಸಲ್ಮಾನ ಜನಸಂಖ್ಯೆ ಇರುವ ಮುರ್ಷಿದಾಬಾದ್, ಮಾಲದಾ ಮತ್ತು ಉತ್ತರ ದಿನಾಜಪುರ ಭಾಗಗಳಲ್ಲಿ ಭಾಜಪವನ್ನು ರಾಜಕೀಯವಾಗಿ ಅಸ್ಪೃಶ್ಯವೆಂದು ಪರಿಗಣಿಸಲಾಗುತ್ತಿತ್ತು; ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ‘ಒಂದು ವೇಳೆ ಮುಸಲ್ಮಾನ ಜನಸಂಖ್ಯೆ ಹೆಚ್ಚಿದ್ದರೆ, ಭಾಜಪ ಗೆಲ್ಲಲು ಸಾಧ್ಯವಿಲ್ಲ’ ಎಂಬ ಸಮೀಕರಣವು ಈಗ ಅಳಿಸಿಹೋಗಿದೆ. ಭಾಜಪವು ಮುಸಲ್ಮಾನ ಬಹುಸಂಖ್ಯಾತ ಮತ್ತು ತೃಣಮೂಲ ಕಾಂಗ್ರೆಸ್ಸಿನ ಅನೇಕ ಭದ್ರಕೋಟೆಗಳನ್ನು ಭೇದಿಸಿದೆ ಎಂದು ಬಂಗಾಳದ ರಾಜಕೀಯ ವಿಶ್ಲೇಷಕರು ಮತ್ತು ಹಿಂದುತ್ವನಿಷ್ಠ ನಾಯಕರಾದ ಶ್ರೀ. ಪಿನಾಕಿ ಗಂಗೋಪಾಧ್ಯಾಯ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ತಮ್ಮ ನಿರೀಕ್ಷಣೆಯನ್ನು ತಿಳಿಸಿದ್ದಾರೆ.
Political analyst Pinaki Gangopadhyay described BJP’s gains in Bengal as a result of strong Hindu unity and disciplined voting patterns. 🚩
The equation that “BJP cannot win if the Muslim population is high” has now been erased. In regions like Murshidabad, Malda, and North… pic.twitter.com/PxexFRKCY7
— Sanatan Prabhat (@SanatanPrabhat) May 8, 2026
ಮುಸಲ್ಮಾನರ ಮತಗಳ ವಿಭಜನೆ !

ಶ್ರೀ. ಗಂಗೋಪಾಧ್ಯಾಯ ಅವರು ಮಾತನಾಡುತ್ತಾ, ಭಾಜಪ ಕೇವಲ ಹಿಂದೂ ಅಭ್ಯರ್ಥಿಗಳಿಂದಾಗಿ ಗೆಲ್ಲಲಿಲ್ಲ. ಅದು ಗೆದ್ದಿದ್ದು ಏಕೆಂದರೆ ಈ ಮತಕ್ಷೇತ್ರಗಳ ಹಿಂದೂಗಳ ಮತಗಳು ಅಸಾಧಾರಣ ಶಿಸ್ತು ಮತ್ತು ಒಗ್ಗಟ್ಟಿನಿಂದ ಮತದಾನ ಮಾಡಿವೆ. ಮುಸಲ್ಮಾನರಿಗೆ ತೃಣಮೂಲ ಕಾಂಗ್ರೆಸ್ ಮೇಲೆ ಅಪನಂಬಿಕೆ ಇತ್ತು, ಇದರಿಂದಾಗಿ ಅವರ ನಿಷ್ಠೆಯು ತೃಣಮೂಲದ ಬದಲಿಗೆ ಇತರ ಮುಸಲ್ಮಾನ ಪಕ್ಷಗಳತ್ತ ಹೊರಳಿತು. ಉದಾಹರಣೆಗೆ ಮಾಕಪ, ಕಾಂಗ್ರೆಸ್, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಹುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ ಪಕ್ಷಗಳ ನಡುವೆ ಮುಸಲ್ಮಾನರ ಮತಗಳು ವಿಭಜನೆಯಾದವು. ಒಂದು ಕಡೆ ಮುಸಲ್ಮಾನ ಮತಗಳ ವಿಭಜನೆ ಮತ್ತು ಇನ್ನೊಂದು ಕಡೆ ಹಿಂದೂ ಮತಗಳ ಏಕೀಕರಣದಿಂದಾಗಿ ಭಾಜಪಕ್ಕೆ ವಿಜಯ ಲಭಿಸಿತು.
ಮಮತಾ ಬ್ಯಾನರ್ಜಿ ಸರಕಾರದಿಂದ ಭ್ರಮನಿರಸನ !
ಅವರು ಮಾತು ಮುಂದುವರೆಸುತ್ತಾ, ಈ ಎಲ್ಲದರ ಹಿಂದಿನ ಆಳವಾದ ಸಂದೇಶವೆಂದರೆ, ಈ ಕ್ಷೇತ್ರಗಳನ್ನು ಗೆಲ್ಲಲು ಭಾಜಪಕ್ಕೆ ತನ್ನ ಗುರುತನ್ನು ಮರೆಮಾಚುವ ಅಗತ್ಯವಿರಲಿಲ್ಲ. ಅವರು ತೋರಿಕೆಯನ್ನು ಮಾಡುವ ಅಗತ್ಯವೂ ಇರಲಿಲ್ಲ. ಅವರು ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು ಮತ್ತು ಆದರೂ ಗೆದ್ದರು; ಏಕೆಂದರೆ ಮತದಾರರು ಕಾನೂನು ಮತ್ತು ಸುವ್ಯವಸ್ಥೆ, ಭ್ರಷ್ಟಾಚಾರ, ನುಸುಳುವಿಕೆ, ಮಹಿಳೆಯರ ಸುರಕ್ಷತೆ, ಸ್ಥಳೀಯ ಭಯೋತ್ಪಾದನೆ ಮತ್ತು ಆಡಳಿತಾರೂಢರ ವಿಶ್ವಾಸಾರ್ಹತೆ ಸೇರಿದಂತೆ ಆಡಳಿತ ವಿರೋಧಿ ಅಂಶಗಳನ್ನು ಗಮನಿಸಿದರು. ಭ್ರಷ್ಟಾಚಾರದ ಅಸಂಖ್ಯಾತ ಪ್ರಕರಣಗಳು ಮತ್ತು ಮಮತಾ ಸರಕಾರವು ಈ ಭಾಗಗಳಲ್ಲಿ ನೀಡಿದ್ದ ಅಭಿವೃದ್ಧಿಯ ಭರವಸೆಗಳನ್ನು ಈಡೇರಿಸದ ಕಾರಣ, ಮುಸಲ್ಮಾನ ಮತಗಳು ತೃಣಮೂಲದಿಂದ ದೂರವಾಗಿ ಇತರ ಪಕ್ಷಗಳಲ್ಲಿ ವಿಭಜನೆಯಾದವು. ಇದೊಂದು ನಿಜವಾದ ರಾಜಕೀಯ ಭೂಕಂಪವಾಗಿದೆ. ಮುರ್ಷಿದಾಬಾದ್, ಮಾಲದಾ, ಉತ್ತರ ದಿನಾಜಪುರದಲ್ಲಿ ಭಾಜಪದ ವಿಜಯವು ಏನನ್ನು ತೋರಿಸಿಕೊಡುತ್ತದೆ ಎಂದರೆ, ಒಮ್ಮೆ ಹಿಂದೂ ಮತಗಳು ಒಗ್ಗೂಡಿ ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ, ತೃಣಮೂಲದ ಅತ್ಯಂತ ಶಕ್ತಿಯುತ ಕೋಟೆಗಳೂ ಸಹ ಕುಸಿಯಬಹುದು, ಎಂದಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ