Suvendu Adhikari BJP Leader : ನಂದಿಗ್ರಾಮದಲ್ಲಿ ನಾನು ಕೇವಲ ಹಿಂದೂಗಳಿಗಾಗಿ ಮಾತ್ರ ಕೆಲಸ ಮಾಡುವೆ! – ಸುವೇಂದು ಅಧಿಕಾರಿ, ಭಾಜಪ ನಾಯಕ

ಕೋಲಕಾತಾ (ಬಂಗಾಳ) – ನಂದಿಗ್ರಾಮದ ಮುಸ್ಲಿಮರು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ, ಹಾಗೂ ಹಿಂದೂಗಳು ನನಗೆ ಮತ ನೀಡಿದ್ದಾರೆ. ಆದ್ದರಿಂದ, ಈಗ ನಾನು ಆಯ್ಕೆಯಾಗಿದ್ದು, ನಂದಿಗ್ರಾಮದಲ್ಲಿ ಕೇವಲ ಹಿಂದೂಗಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರನ್ನು ಸತತ ಎರಡನೇ ಬಾರಿಗೆ ಹೀನಾಯವಾಗಿ ಸೋಲಿಸಿದ ಭಾಜಪ ನಾಯಕ ಸುವೇಂದು ಅಧಿಕಾರಿ ವಿಜಯದ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧಿಕಾರಿ, ಮಮತಾ ಬ್ಯಾನರ್ಜಿ ಅವರ ರಾಜಕೀಯ ಮುಗಿದಿದೆ. ನನ್ನ ಗೆಲುವು ಕೇವಲ ಭಾಜಪದ ಗೆಲುವಲ್ಲ, ಬದಲಿಗೆ ಪ್ರತಿಯೊಬ್ಬ ಸನಾತನಿ ವ್ಯಕ್ತಿಯ ಗೆಲುವಾಗಿದೆ. ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಈ ನೆಲದಲ್ಲಿ ಕಮಲ ಅರಳುವುದನ್ನು (ಭಾಜಪ ಆಯ್ಕೆಯಾಗುವುದನ್ನು) ಕಂಡಿದ್ದ ಕನಸು ನನಸಾಗಿದೆ. ಬಂಗಾಳದಲ್ಲಿ ಆಶೆಯ ಹೊಸ ಮುಂಜಾವು ಮೂಡಿದೆ. ಡಾ. ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದ್ದರು. ಮುಂದೆ ಇದೇ ಪಕ್ಷದ ಕೆಲವು ಮಾಜಿ ಸದಸ್ಯರು ಸೇರಿ ಭಾರತೀಯ ಜನತಾ ಪಕ್ಷವನ್ನು (ಭಾಜಪ) ಸ್ಥಾಪಿಸಿದ್ದರು.