
ಆಸನ್ಸೋಲ್ (ಬಂಗಾಳ) – ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪದ ಗೆಲುವಿನ ನಂತರ, ಆಸನ್ಸೋಲ್‌ನಲ್ಲಿ ಕಳೆದ 15 ವರ್ಷಗಳಿಂದ ಮುಚ್ಚಲಾಗಿದ್ದ ಶ್ರೀ ದುರ್ಗಾ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ. ಸ್ಥಳೀಯ ವಿವಾದಗಳು ಮತ್ತು ಆಡಳಿತಾತ್ಮಕ ನಿರ್ಬಂಧಗಳಿಂದಾಗಿ ಈ ದೇವಸ್ಥಾನವು 15 ವರ್ಷಗಳಿಂದ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿತ್ತು. ಇಲ್ಲಿ ವರ್ಷಕ್ಕೊಮ್ಮೆ ಕೇವಲ ಶ್ರೀ ದುರ್ಗಾ ಪೂಜೆ ಮತ್ತು ಶ್ರೀ ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಮಾತ್ರ ಸ್ವಲ್ಪ ಮಟ್ಟಿನ ಜನಸಂದಣಿ ಇರುತ್ತಿತ್ತು.
ಉತ್ತರ ಆಸನ್ಸೋಲ್‌ನ ಭಾಜಪದ ನೂತನ ಶಾಸಕ ಕೃಷ್ಣೇಂದು ಮುಖರ್ಜಿ ಅವರು ಚುನಾವಣೆಯ ಮೊದಲು, ಗೆದ್ದ ತಕ್ಷಣ ಮುಚ್ಚಿರುವ ದೇವಸ್ಥಾನವನ್ನು ತೆರೆಯುತ್ತೇನೆ ಎಂದು ಭರವಸೆ ನೀಡಿದ್ದರು. ಮೇ 4 ರಂದು ಭಾಜಪದ ಗೆಲುವು ಖಚಿತವಾಗುತ್ತಿದ್ದಂತೆ, ವಿಜಯಿಯಾದ ಮುಖರ್ಜಿ ಅವರು ಸ್ವತಃ ದೇವಸ್ಥಾನಕ್ಕೆ ತಲುಪಿ, ದೇವಸ್ಥಾನದ ಬೀಗವನ್ನು ತೆರೆದು ಅಲ್ಲಿ ಪೂಜೆ ಸಲ್ಲಿಸಿದರು.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein