ಬಂಗಾಳದ ಫಲಿತಾಂಶಕ್ಕೂ ಮುನ್ನವೇ ಭಾಜಪ ಅಧಿಕಾರಕ್ಕೆ ಬರುವ ಭೀತಿಯಿಂದ ಉತ್ತರ ಪ್ರದೇಶದ ಮೌಲಾನಾದಿಂದ ಮುಸ್ಲಿಮರಿಗೆ ಕರೆ
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)

ಕೋಲಕಾತಾ (ಬಂಗಾಳ) – ಬಂಗಾಳ ಚುನಾವಣಾ ಫಲಿತಾಂಶವು ಮೇ 4 ರಂದು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೌಲಾನಾ ಒಬ್ಬರ ವಿಡಿಯೋ ಮುನ್ನೆಲೆಗೆ ಬಂದಿದೆ. ಜರ್ಜಿಶ್ ಅನ್ಸಾರಿ ಎಂಬ ಹೆಸರಿನ ಇವರು ‘ಬಂಗಾಳದಲ್ಲಿ ಭಾಜಪ ಅಧಿಕಾರಕ್ಕೆ ಬರಲಿದೆ’ ಎಂಬ ವಿಚಾರದಿಂದ ಭೀತಿಗೊಳಗಾಗಿದ್ದಾರೆ. ಅವರು ಮುಸ್ಲಿಮರನ್ನು ಉದ್ದೇಶಿಸಿ, “ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಇದರಿಂದ ನೀವು ‘ಸಿಂಹ’ದಿಂದ ಬಚಾವಾಗುತ್ತೀರಿ” ಎಂದು ಹೇಳಿದ್ದಾರೆ. ಇಲ್ಲಿ ಮೌಲಾನಾ ಅವರು ‘ಸಿಂಹ’ ಎಂಬ ಪದವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿ ಬಳಸಿದ್ದಾರೆ. “ಈಗ ಬಂಗಾಳದ ಸ್ಥಿತಿಯೂ ಉತ್ತರ ಪ್ರದೇಶ ಮತ್ತು ಬಿಹಾರದಂತೆಯೇ ಆಗಲಿದೆ” ಎಂದು ಅವರು ಹೇಳಿದ್ದಾರೆ.
ಮೌಲಾನಾ ನೀಡಿದ ಹೇಳಿಕೆಗಳು!
1. ರಕ್ತದ ಕಣ್ಣೀರು ಸುರಿಸುವ ಕಾಲ ಬಂದಿದೆ. ಇದು ಒಳ್ಳೆಯ ಸಮಯವಲ್ಲ.
2. ಭವಿಷ್ಯದಲ್ಲಿ ನಮಗೆ ತಿಳಿಯಲಿದೆ, (ಬಂಗಾಳದಲ್ಲಿ) ಇಂತಹ ಕಡೆ ಸಭೆ ನಡೆಸಲು ಸಾಧ್ಯವಿಲ್ಲ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್ ನೀಡುವ ಅಗತ್ಯವಿಲ್ಲ (ಅನುಮತಿ ಸಿಗುವುದಿಲ್ಲ). ಆ ಸಮಯದಲ್ಲಿ ನಾವು ನಿಮ್ಮ ವಸತಿಗೆ ಬಂದು ಶುಕ್ರವಾರದ ಪ್ರವಚನ (ಖುತ್ಬಾ) ನೀಡಿ ನಿಮ್ಮನ್ನು ಅಭಿನಂದಿಸುತ್ತೇವೆ.
3. ಬಿಹಾರ ಮತ್ತು ಉತ್ತರ ಪ್ರದೇಶದ ಜನರ ಸ್ಥಿತಿಯನ್ನು ನೋಡಿ ನೀವು (ಬಂಗಾಳದ ಮುಸ್ಲಿಮರು) ಸ್ವಲ್ಪ ಸಮಯದವರೆಗೆ ನರಿಯಾಗಿ ಮತ್ತು ಚಾಣಾಕ್ಷತನದಿಂದ ಕೆಲಸ ಮಾಡಿ. ಈ ಚಾಣಾಕ್ಷತನವೇ ಮುಂಬರುವ ದಿನಗಳಲ್ಲಿ ಸಿಂಹದ ದೌರ್ಜನ್ಯದಿಂದ ನಿಮ್ಮನ್ನು ರಕ್ಷಿಸಬಹುದು. ನಾನು ಸಿಂಹದ ಹೆಸರನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲದಿದ್ದರೆ ನಾನು ಜೈಲಿಗೆ ಹೋಗಬೇಕಾಗುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!