ಭಾಜಪ ಪದಾಧಿಕಾರಿ ಸರ್ವೇಶ್ ಮೆಹೆಂದಳೆ ಅವರಿಗೆ ನನ್ನ ಬೆಂಬಲ

ಮುಂಬಯಿ – ಪುಣೆಯ ಕೊಂಡ್ವಾದಲ್ಲಿ ಈಗ ಹಿಂದೂಗಳನ್ನು ಹುಡುಕಲು ದುರ್ಬೀನು ಹಚ್ಚಬೇಕಾದ ಸ್ಥಿತಿ ಬಂದಿದೆ. ದೇಶವನ್ನು 2047ರ ವೇಳೆಗೆ ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನದಿಂದ ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆ. ಈ ಶಕ್ತಿಗಳು ಕೆಲವು ನಿರ್ದಿಷ್ಟ ಭಾಗಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು, ಅದರಲ್ಲಿ ಪುಣೆಯ ಕೊಂಡ್ವಾ ಪ್ರದೇಶ ಪ್ರಮುಖವಾಗಿ ಸೇರಿದೆ ಎಂದು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
ಸಚಿವ ರಾಣೆ ಮಾತು ಮುಂದುವರೆಸುತ್ತಾ, ಅಲ್ಲಿ ಎಲ್ಲವನ್ನೂ ಹಸಿರು ಮಾಡುವ ಪ್ರಯತ್ನ ಕೆಲವು ಹಸಿರು ಹಾವುಗಳ ಮೂಲಕ ನಡೆಯುತ್ತಿದೆ. ನನ್ನ ಸಹೋದ್ಯೋಗಿ ಇದೇ ವಾಸ್ತವವನ್ನು ಜನರ ಮುಂದೆ ಇಟ್ಟಿದ್ದು, ಅವರಿಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಭಾಜಪ ಪದಾಧಿಕಾರಿ ಸರ್ವೇಶ್ ಮೆಹೆಂದಳೆ ಅವರ ವಿಡಿಯೋ ಒಂದಕ್ಕೆ ಬೆಂಬಲ ನೀಡುವ ಸಂದರ್ಭದಲ್ಲಿ ರಾಣೆ ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಸೌಹಾರ್ದತೆ ಕೆಡಿಸಿದ ಆರೋಪದ ಮೇಲೆ ಕೊಂಡ್ವಾ ಪೊಲೀಸರು ಸರ್ವೇಶ್ ಮೆಹೆಂದಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಏನಿದು ಪ್ರಕರಣ ?
ಸರ್ವೇಶ್ ಮೆಹೆಂದಳೆ ಅವರು ಭಾಜಪ ಯುವ ಮೋರ್ಚಾ ಪುಣೆ ನಗರದ ಖಜಾಂಚಿಯಾಗಿದ್ದಾರೆ. ಅವರು ಕೊಂಡ್ವಾದ ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆಯ ಕಟ್ಟಡವೊಂದರ ವಿಡಿಯೋ ಸಿದ್ಧಪಡಿಸಿದ್ದರು. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯ ಹೊರಗಿನ ಅತಿಕ್ರಮಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿ ನೀಡುವಾಗ ಅವರು ಈ ಪ್ರದೇಶವನ್ನು ಪಾಕಿಸ್ತಾನದ ಕರಾಚಿ ನಗರಕ್ಕೆ ಹೋಲಿಸಿದ್ದಾರೆ. ಅದರಲ್ಲಿ ಅವರು ವೆಲ್ಕಮ್ ಟು ಕೊಂಡ್ವಾ ಆಫ್ ಪಾಕಿಸ್ತಾನ್ ಎಂದು ಆರಂಭಿಸಿ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ