‘ಅಜ್ಞಾತ’ ವ್ಯಕ್ತಿಯಿಂದ ಹತ್ಯೆಯಾಗಿರುವ ಶಂಕೆ

ನವದೆಹಲಿ – ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸಜ್ಜಾದ್ ಅಹ್ಮದ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆಯಿಂದ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ನಿಗೂಢ ಹತ್ಯೆಗಳ ಪ್ರಕರಣಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾದಂತಾಗಿದೆ. ಅಹ್ಮದ್ ನ ಸಾವಿಗೆ ನಿಖರ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ.
ಭಾರತದ ಮಾಜಿ ಗುಪ್ತಚರ ಅಧಿಕಾರಿ ಲಕ್ಕಿ ಬಿಸ್ತ್ ಈ ಕುರಿತು ಮಾಹಿತಿ ನೀಡಿದ್ದು, “ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ – ಅಂತರ ಸೇವಾ ಗುಪ್ತಚರ ಸಂಸ್ಥೆ) ಮುಖ್ಯಸ್ಥ ಅಸಿಮ್ ಮಲಿಕ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಸ್ತುತ ಅಸ್ವಸ್ಥರಾಗಿದ್ದಾರೆ. ಇದಕ್ಕೆ ಕಾರಣ ‘ಅಜ್ಞಾತ ಬಂದೂಕುಧಾರಿಗಳು’. ಈ ಅಜ್ಞಾತ ಬಂದೂಕುಧಾರಿ ಕಳೆದ ೬ ವರ್ಷಗಳಿಂದ ಪಾಕಿಸ್ತಾನಿಗಳ ನಿದ್ದೆಗೆಡಿಸಿದ್ದಾನೆ ಎಂಬ ಚರ್ಚೆ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿದೆ. ಈ ಅಜ್ಞಾತ ಬಂದೂಕುಧಾರಿ ಕೆಲವೊಮ್ಮೆ ‘ಜೈಶ್’ ಕಮಾಂಡರ್ ಅನ್ನು ಕೊಂದರೆ, ಇನ್ನು ಕೆಲವೊಮ್ಮೆ ‘ಲಷ್ಕರ್-ಎ-ತೊಯ್ಬಾ’ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಾನೆ. ಸಜ್ಜಾದ್ ಅಹ್ಮದ್‌ನನ್ನು ಇಸ್ಲಾಮಾಬಾದ್‌ನ ಮನೆಯಲ್ಲೇ ಹತ್ಯೆ ಮಾಡಲಾಗಿದೆ. ಸಜ್ಜಾದ್ ಅಹ್ಮದ್ ಹಿಜ್ಬುಲ್‌ನ ದೊಡ್ಡ ಕಮಾಂಡರ್ ಆಗಿದ್ದನು. ಐಎಸ್‌ಐ ನ ಅಧಿಕಾರಿಗಳು ಈ ಅಜ್ಞಾತ ಬಂದೂಕುಧಾರಿಗಳಿಂದ ಎಷ್ಟು ಕಂಗಾಲಾಗಿದ್ದಾರೆಂದರೆ, ಈಗ ಅವರು ‘ಭಯೋತ್ಪಾದಕರ ಅಂತ್ಯಕ್ರಿಯೆಗೆ ಹೋಗಿ ನಮಗೆ ಸಾಕಾಗಿದೆ’ ಎಂದು ಹೇಳತೊಡಗಿದ್ದಾರೆ. ಐಎಸ್‌ಐ ಬಳಿ ಸಾವಿರಾರು ಬಂಕರ್ ಗಳು ಮತ್ತು ಭದ್ರತೆಗಳಿದ್ದರೂ ಭಯೋತ್ಪಾದಕರನ್ನು ಉಳಿಸಲು ಸಾಧ್ಯವಾಗಿಲ್ಲ. ಯಾರು ಭಾರತದ ವಿರುದ್ಧ ತಪ್ಪು ಆಲೋಚನೆ ಮಾಡುತ್ತಾರೋ, ಅವರು ಸಾಯಲೇಬೇಕು,’ ಎಂದು ಲಕ್ಕಿ ಬಿಸ್ತ್ ಹೇಳಿದ್ದಾರೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !