ಮುಖ್ಯಮಂತ್ರಿಗಳು ಸೇರಿದಂತೆ ತೃಣಮೂಲದ ಅನೇಕ ನಾಯಕರಿಂದ ಮತದಾನ ಯಂತ್ರಗಳನ್ನು ಇರಿಸಲಾಗಿರುವ ಭದ್ರತಾ ಕೊಠಡಿಯ ಹೊರಗೆ ಧರಣಿ ಸತ್ಯಾಗ್ರಹ

ಕೋಲಕಾತಾ (ಬಂಗಾಳ) – ಇಲ್ಲಿನ ಭವಾನಿಪುರ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿರುವ ಮತದಾನ ಯಂತ್ರಗಳಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ಅಧಿಕಾರಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಏಪ್ರಿಲ್ ೩೦ ರ ರಾತ್ರಿ ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರು ಮತ್ತು ಅನೇಕ ಕಾರ್ಯಕರ್ತರು ಖುದಿರಾಮ್ ಅನುಶೀಲನ ಕೇಂದ್ರದಲ್ಲಿರುವ ಭದ್ರತಾ ಕೊಠಡಿಯ (‘ಸ್ಟ್ರಾಂಗ್ ರೂಮ್’) ಹೊರಗೆ ಜಮಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಈ ಕೊಠಡಿಯಲ್ಲಿ ಮತದಾನ ಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲಾಗಿದೆ. ಈ ಸಮಯದಲ್ಲಿ ಸ್ವತಃ ಮುಖ್ಯಮಂತ್ರಿಗಳೂ ಸಹ ೪ ಗಂಟೆಗಳ ಕಾಲ ಅಲ್ಲಿಯೇ ಇದ್ದರು. ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಾ, ಯಾವುದೇ ಮುನ್ಸೂಚನೆ ನೀಡದೆ ಭದ್ರತಾ ಕೊಠಡಿಯನ್ನು ತೆರೆಯಲಾಗಿತ್ತು ಮತ್ತು ಆ ಪರಿಸರದಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳು ಉಪಸ್ಥಿತರಿದ್ದರು ಎಂದು ಹೇಳಿದೆ.
TMC alleges EVM Tampering in CM Mamata Banerjee's Bhabanipur constituency
CM and several TMC leaders stage a protest outside the strongroom where voting machines are kept.
On one hand, Mamata Banerjee is claiming victory on 226 seats in 2026, yet on the other, she is going… pic.twitter.com/6kkd4NOo9U
— Sanatan Prabhat (@SanatanPrabhat) May 1, 2026
ಮತ ಎಣಿಕೆಯಲ್ಲಿನ ಅಕ್ರಮ ತಡೆಯಲು ನಾವು ಪ್ರಾಣವನ್ನೇ ನೀಡುತ್ತೇವೆ !(ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಈ ಸಮಯದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಾ, ಒಂದು ವೇಳೆ ಯಾರಾದರೂ ಮತದಾನ ಯಂತ್ರಗಳನ್ನು ಲೂಟಿ ಮಾಡಲು ಅಥವಾ ಮತ ಎಣಿಕೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸಿದರೆ, ಅದನ್ನು ತಡೆಯಲು ನಾವು ನಮ್ಮ ಪ್ರಾಣವನ್ನೇ ನೀಡುತ್ತೇವೆ ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್ ತನ್ನ ‘ಎಕ್ಸ್’ ಖಾತೆಯಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ, ಈ ವಿಡಿಯೋದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಭಾಜಪ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮತಪೆಟ್ಟಿಗೆಗಳನ್ನು ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ ಎಂದು ವಾದಿಸಿತ್ತು.
ಚುನಾವಣಾ ಆಯೋಗದ ಸ್ಪಷ್ಟೀಕರಣ !
ಆದರೆ ಚುನಾವಣಾ ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಅಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಯು ಕೇವಲ ಅಂಚೆ ಮತಪತ್ರಗಳ (ಪೋಸ್ಟಲ್ ಬ್ಯಾಲೆಟ್) ಪರಿಶೀಲನೆಯಾಗಿತ್ತು ಎಂದು ಹೇಳಿದೆ. ಹಾಗೆಯೇ ಎಲ್ಲಾ ಮತದಾನ ಯಂತ್ರಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ