ದಾಭೋಲ್ಕರ್ ಪ್ರಕರಣದಲ್ಲಿ ಹಿಂದುತ್ವವಾದಿ ಯುವಕ ಶರದ್ ಕಳಸ್ಕರ್‌ಗೆ ಜಾಮೀನು!

ಮುಂಬಯಿ – ದಾಭೋಲ್ಕರ್ ಅವರ ಹತ್ಯೆಯ ನಂತರ, ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳು ಕೇವಲ ಒಂದು ಗಂಟೆಯೊಳಗೆ ನೇರವಾಗಿ ಹಿಂದುತ್ವವಾದಿ ಸಂಘಟನೆಗಳತ್ತ ಬೊಟ್ಟು ಮಾಡಿದರು ಮತ್ತು ತನಿಖೆ ಅದೇ ದಿಕ್ಕಿನಲ್ಲಿ ಪ್ರಾರಂಭವಾಯಿತು. ಪ್ಲಾಂಚೆಟ್ ಬಳಸಿ ದಾಭೋಲ್ಕರ್ ಅವರ ಆತ್ಮವು ಸನಾತನ ಸಂಸ್ಥೆಯ ಹೆಸರನ್ನು ತೆಗೆದುಕೊಳ್ಳುತ್ತಿದೆ ಎಂದು ಬಿಂಬಿಸಲಾಗುತ್ತಿತ್ತು, ಮತ್ತು ಕೆಲವೊಮ್ಮೆ ದಾಭೋಲ್ಕರ್ ಅವರ ಬೆಂಬಲಿಗರು ನೇರವಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದರು. ಇವೆಲ್ಲವೂ ನಡೆಯುತ್ತಿರುವಾಗ, ಸನಾತನ ಸಂಸ್ಥೆ ಮತ್ತು ಅದರ ಸಾಧಕರು ಸಂಪೂರ್ಣ ತನಿಖೆಯನ್ನು ಶಾಂತವಾಗಿ ಎದುರಿಸಿದರು. ಸಂಸ್ಥೆ ಅಥವಾ ಸಂಸ್ಥೆಯ ಸಾಧಕರು ತನಿಖಾ ಸಂಸ್ಥೆಗಳಿಗೆ ಸಹಕರಿಸಲಿಲ್ಲ ಎಂಬ ಆರೋಪ ಎಂದಿಗೂ ಅವರ ಮೇಲೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ, 2015 ರಿಂದ 2023 ರವರೆಗಿನ ಅವಧಿಯಲ್ಲಿ, ಈ ಪ್ರಕರಣದ ತನಿಖೆಯು ಹೈಕೋರ್ಟ್‌ನ ಉಸ್ತುವಾರಿಯಲ್ಲಿ ನಡೆಯಿತು. ಇಂತಹ ಪರಿಸ್ಥಿತಿಯಲ್ಲಿ ತನಿಖೆಯ ವೇಳೆ ಸಂಸ್ಥೆಯ ವಿರುದ್ಧ ಯಾವುದೇ ಸಾಕ್ಷ್ಯಗಳು ದೊರೆಯಲಿಲ್ಲ. 5 ಜನರ ಪೈಕಿ 3 ಜನರನ್ನು ಸೆಷನ್ಸ್ ನ್ಯಾಯಾಲಯವು ಈ ಹಿಂದೆಯೇ ಖುಲಾಸೆಗೊಳಿಸಿದೆ. ಶಿಕ್ಷೆಗೊಳಗಾದ ಇಬ್ಬರಲ್ಲಿ ಒಬ್ಬರಾದ ಹಿಂದುತ್ವವಾದಿ ಯುವಕ ಶರದ್ ಕಳಸ್ಕರ್ ಅವರಿಗೆ ಏಪ್ರಿಲ್ 29 ರಂದು ಮುಂಬಯಿ ಹೈಕೋರ್ಟ್ ಜಾಮೀನು ನೀಡಿದೆ. ಆರೋಪಿ ಶರದ್ ಕಳಸ್ಕರ್ ಘಟನಾ ಸ್ಥಳದಲ್ಲಿದ್ದರು ಎಂಬುದೇ ಸಾಬೀತಾಗಿಲ್ಲ ಎಂದು ಪರಿಗಣಿಸಿ ಹೈಕೋರ್ಟ್ ಈ ಜಾಮೀನು ನೀಡಿರುವುದು ಅತ್ಯಂತ ಮಹತ್ವದ್ದಾಗಿದೆ. ಕಳೆದ 10 ವರ್ಷಗಳಿಂದ ಈ ಪ್ರಕರಣದಲ್ಲಿ ಸಂಸ್ಥೆಯ ಯಾವುದೇ ಪಾತ್ರವಿಲ್ಲ ಎಂದು ಸನಾತನ ಸಂಸ್ಥೆ ಹೇಳುತ್ತಲೇ ಇತ್ತು, ಆದರೂ ಮತ್ತೆ ಮತ್ತೆ ಸಂಸ್ಥೆಯನ್ನು ಸಿಲುಕಿಸುವ ಪ್ರಯತ್ನಗಳು ನಡೆದವು. ಕನಿಷ್ಠ ನ್ಯಾಯಾಲಯದ ತೀರ್ಪುಗಳ ನಂತರವಾದರೂ ಈ ಜನರು ಸುಮ್ಮನಿರುತ್ತಾರೆಯೇ? ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ಪ್ರಶ್ನಿಸಿದ್ದಾರೆ.
ಶ್ರೀ. ವರ್ತಕ್ ಮಾತನಾಡುತ್ತಾ, ಈ ಪ್ರಕರಣದಲ್ಲಿ ಕಾಲಕಾಲಕ್ಕೆ ದಾಭೋಲ್ಕರ್ ಕುಟುಂಬದವರು ‘ದಾಭೋಲ್ಕರ್ ಅವರ ನಿಜವಾದ ಕೊಲೆಗಾರರು ಸಿಗದಿದ್ದರೂ ಪರವಾಗಿಲ್ಲ; ಅಥವಾ ನಿಜವಾದ ಕೊಲೆಗಾರರನ್ನು ಬಿಡಿ; ಆದರೆ ಸನಾತನದ ಸಾಧಕರನ್ನು ಹೇಗಾದರೂ ಮಾಡಿ ಸಿಕ್ಕಿಹಾಕಿಸಿ’ ಎಂಬಂತಹ ನಿಲುವನ್ನೇ ಕೊನೆಯವರೆಗೂ ಹೊಂದಿದ್ದು ಕಂಡುಬಂದಿದೆ ಎಂದರು. ಇದರರ್ಥ ಅವರಿಗೆ ದಾಭೋಲ್ಕರ್ ಅವರ ನಿಜವಾದ ಹಂತಕರ ಬಗ್ಗೆ ಕಾಳಜಿ ಇರಲಿಲ್ಲ, ಬದಲಿಗೆ ಕೇವಲ ಹಿಂದುತ್ವವಾದಿಗಳನ್ನು ಹತ್ತಿಕ್ಕಲು ಅವರು ಬಯಸಿದ್ದರು. ಹಿಂದೂ ಸಂಘಟನೆಯಾಗಿ ನಾವು ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ಹಿಂದೂವಿನ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ಮುಂದೆಯೂ ಇರುತ್ತೇವೆ. ಈ ಜಾಮೀನಿಗಾಗಿ ಕಾನೂನು ಹೋರಾಟ ನಡೆಸಿದ ಹಿರಿಯ ವಕೀಲ ನಿತಿನ್ ಪ್ರಧಾನ್, ವಕೀಲೆ ಸಿದ್ಧವಿದ್ಯಾ, ವಕೀಲ ವೀರೇಂದ್ರ ಇಚಲಕರಂಜಿಕರ್, ವಕೀಲೆ ಶುಭದಾ ಖೋತ್ ಮತ್ತು ಇತರ ಎಲ್ಲಾ ಸಹಾಯಕ ವಕೀಲರನ್ನು ನಾವು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಇವರಿಬ್ಬರಿಗೂ ನ್ಯಾಯ ಸಿಗಲಿದ್ದು, ಶೀಘ್ರದಲ್ಲೇ ಇವರೂ ಕೂಡ ದೋಷಮುಕ್ತರಾಗಲಿದ್ದಾರೆ ಎಂಬ ನಂಬಿಕೆ ನಮಗೆ ನ್ಯಾಯದೇವತೆಯ ಮೇಲಿದೆ, ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ