ಅಂಗಡಿ ತಡರಾತ್ರಿಯವರೆಗೆ ತೆರೆದಿಟ್ಟಿದ್ದಕ್ಕಾಗಿ ಹಲ್ಲೆ ಮಾಡಿದರೆಂದು ಹೇಳಿಕೆ
ಹೆಸರಾಂತ ಉದ್ಯಮಿ ಮೋಹನದಾಸ ಪೈ ಅವರಿಂದ ತೀವ್ರ ವಿರೋಧ ವ್ಯಕ್ತ

ಬೆಂಗಳೂರು – ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಕಣ್ಣಮಂಗಲ ಪ್ರದೇಶದಲ್ಲಿನ ಚಹಾದ ಅಂಗಡಿಯು ತಡರಾತ್ರಿಯವರೆಗೆ ತೆರೆದಿತ್ತು. ಈ ಕಾರಣವನ್ನು ನೀಡಿ ಸ್ಥಳೀಯ ದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಕೇಶ ಅವರು ಹಿಂದೂ ಆಗಿರುವ ಆ ಅಂಗಡಿಕಾರನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಹೆಸರಾಂತ ಉದ್ಯಮಿ ಟಿ.ವಿ. ಮೋಹನದಾಸ ಪೈ ಅವರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ನಿರೀಕ್ಷಕ ರಾಕೇಶ ನಡೆಸಿದ ಹಲ್ಲೆಯ ಸಂಪೂರ್ಣ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ರಾಕೇಶ ಅವರು ಅತ್ಯಂತ ಉದ್ಧಟತನದಿಂದ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅವರು ಅಂಗಡಿಕಾರನೊಂದಿಗೆ ಮಾತನಾಡುವ ಬದಲಿಗೆ ನೇರವಾಗಿ ಲಾಠಿ ಬೀಸುತ್ತಾ ಮತ್ತು ಅಮಾನುಷವಾಗಿ ಹೊಡೆಯುತ್ತಿರುವುದು ಕಂಡುಬಂದಿದೆ.
ನಾವು ಗುಲಾಮರಲ್ಲ, ಸ್ವತಂತ್ರರು! – ಮೋಹನದಾಸ ಪೈ
For our Minister @DrParameshwara Police brutality like beating up people should stop. How can citizens be beaten like this? We are not subjects of anybody but free citizens in a free country. Minister please protect citizens from such brutality. @DgpKarnataka @CMofKarnataka avare… https://t.co/fdo6PJvRjo
— Mohandas Pai (@TVMohandasPai) April 26, 2026
ಪೈ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುತ್ತಾ, ಪೊಲೀಸರ ಅಮಾನುಷ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಅವರು ಜನರನ್ನು ಈ ರೀತಿ ಹೇಗೆ ಹೊಡೆಯಲು ಸಾಧ್ಯ? ನಾವು ಯಾರಿಗೂ ಅಧೀನರಾಗಿರುವ ಗುಲಾಮರಲ್ಲ, ಬದಲಾಗಿ ಸ್ವತಂತ್ರ ದೇಶದ ಸ್ವತಂತ್ರ ನಾಗರಿಕರಾಗಿದ್ದೇವೆ, ಎಂಬ ಶಬ್ದಗಳಲ್ಲಿ ಘಟನೆಯ ಬಗ್ಗೆ ಕಿಡಿಕಾರಿದ್ದಾರೆ. ಈ ಪೋಸ್ಟನಲ್ಲಿ ಪೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರನ್ನು ಕೂಡ ಉಲ್ಲೇಖಿಸಿದ್ದಾರೆ (ಮೆನ್ಶನ್ ಮಾಡಿದ್ದಾರೆ).
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !