ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಒದಗಿಸಲು ದೆಹಲಿ ಹೈಕೋರ್ಟ್ ಆದೇಶ!

ನವದೆಹಲಿ – ದೆಹಲಿಯ ಉತ್ತಮ ನಗರದಲ್ಲಿ ಹೋಳಿ ಹಬ್ಬದ ದಿನದಂದು ನಡೆದ ಹಿಂದೂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಕುಟುಂಬದ ಭದ್ರತೆಯ ಬಗ್ಗೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಕುಟುಂಬದ ಭದ್ರತೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಏಪ್ರಿಲ್ 13, 2026: ಆರೋಪಿಗಳ ಕಡೆಯವನಾದ ಬಾಬು ಖಾನ್ ಮತ್ತು ಆತನ ಗುಂಪು ಸಂತ್ರಸ್ತ ಹಿಂದೂ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು. “ಒಬ್ಬನನ್ನು ಕೊಂದಿದ್ದೇವೆ, ಈಗ ಎರಡನೇಯವನ ಸರದಿ” ಎಂದು ಎಚ್ಚರಿಸಿದ್ದರು. ಈ ಘಟನೆಯ ನಂತರ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಹಿಂದೂ ಕುಟುಂಬವು ಅನಿವಾರ್ಯವಾಗಿ ತಮ್ಮ ಮನೆಯ ಮುಂದೆ ‘ಮನೆ ಮಾರಾಟಕ್ಕಿದೆ’ ಎಂಬ ಫಲಕವನ್ನು ಹಾಕಿದ್ದಾರೆ.
ಈ ಘಟನೆಯು ಮಾರ್ಚ್ 4, 2026 ರಂದು ನಡೆದಿತ್ತು. ಉತ್ತಮ ನಗರದ ಜೆ.ಜೆ ಕಾಲೋನಿಯಲ್ಲಿ ಯುವಕನೊಬ್ಬ ಮುಸ್ಲಿಂ ಮಹಿಳೆಯ ಮೇಲೆ ನೀರಿನ ಬಲೂನ್ ಎಸೆದಿದ್ದನು. ಇದರಿಂದ ಕೆರಳಿದ ಮುಸ್ಲಿಂ ಗುಂಪೊಂದು ಆ ಯುವಕನ ಮೇಲೆ ಭೀಕರ ಹಲ್ಲೆ ಮಾಡಿತ್ತು, ಈ ಹಲ್ಲೆಯಲ್ಲಿ ಯುವಕ ಸಾವನ್ನಪ್ಪಿದ್ದನು. ಸದ್ಯ ಈ ಪ್ರಕರಣವು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ವಿಚಾರಣೆಯ ಸಂದರ್ಭದಲ್ಲಿ, ಸಂತ್ರಸ್ತ ಕುಟುಂಬದ ರಕ್ಷಣೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”