
ಚಂಡೀಗಢ – ಆಮ್ ಆದ್ಮಿ ಪಕ್ಷದ (ಆಪ್) ಒಟ್ಟು 10 ರಾಜ್ಯಸಭಾ ಸಂಸದರ ಪೈಕಿ 7 ಸಂಸದರು ಭಾಜಪ ಸೇರಲಿದ್ದಾರೆ ಎಂದು ಪಂಜಾಬ್‌ನ ಆಪ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು ಮಾತು ಮುಂದುವರೆಸಿ, ರಾಜ್ಯಸಭಾ ಸಂಸದರಾದ ಸಂದೀಪ ಪಾಠಕ್, ಅಶೋಕ ಕುಮಾರ ಮಿತ್ತಲ್, ಮಾಜಿ ಕ್ರಿಕೆಟಿಗ ಹರಭಜನ ಸಿಂಗ್, ವಿಕ್ರಮಜಿತ ಸಿಂಗ್ ಸಾಹ್ನಿ, ಸ್ವಾತಿ ಮಲಿವಾಲ ಮತ್ತು ಸಂಜೀವ್ ಅರೋರಾ ನಮ್ಮೊಂದಿಗಿದ್ದಾರೆ ಎಂದು ಹೇಳಿದರು. ಪಕ್ಷದ ಮೂರನೇ ಎರಡರಷ್ಟು ಸಂಸದರು ಈ ನಿರ್ಧಾರವನ್ನು ತೆಗೆದುಕೊಂಡಿರುವುದರಿಂದ, ಪಕ್ಷಾಂತರ ವಿರೋಧಿ ಕಾಯ್ದೆ ಇವರಿಗೆ ಅನ್ವಯಿಸುವುದಿಲ್ಲ.
ಈ ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಂದೀಪ ಪಾಠಕ್ ಮತ್ತು ಸಂಸದ ಅಶೋಕ ಮಿತ್ತಲ್ ಕೂಡ ಉಪಸ್ಥಿತರಿದ್ದರು. 10 ದಿನಗಳ ಹಿಂದೆಯಷ್ಟೇ ಜಾರಿ ನಿರ್ದೇಶನಾಲಯ (ED) ಮಿತ್ತಲ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram