ನಾಗಪುರದಲ್ಲಿ ರಿಯಾಜ್ ಕಾಜಿನಿಂದ ಮತಾಂತರಕ್ಕಾಗಿ ಒತ್ತಡ ಹೇರಿದ ಪ್ರಕರಣ
ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯ ವಕೀಲ ಸಲ್ಮಾನ್ ಅಹ್ಮದ್ ಅವರಿಂದ ಆರೋಪ ನಿರಾಕರಣೆ !
ಈ ನಿಧಿಯನ್ನು ಮತಾಂತರಕ್ಕಾಗಿ ಬಳಸಿರುವುದು ಬಯಲಾದರೆ, ಅಂತಹ ಸಂಸ್ಥೆಗಳನ್ನು ನಿಷೇಧಿಸಬೇಕು !

ನಾಗಪುರ – ಇಲ್ಲಿನ ‘ಯುನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ’ ಮತ್ತು ‘ಫಿಕ್ರ್’ ಎಂಬ ಸಂಸ್ಥೆಗಳ ಮಾಧ್ಯಮದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಉಪಕ್ರಮಗಳನ್ನು ನಡೆಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು; ಆದರೆ ಈ ಸಂಸ್ಥೆಗಳಿಗೆ ಅಮೇರಿಕಾ ಸೇರಿದಂತೆ ಯುರೋಪ್ ನಿಂದ ‘ಜಕಾತ್’ ಹೆಸರಿನಲ್ಲಿ ದೊಡ್ಡ ಪ್ರಮಾಣದ ನಿಧಿ ಲಭಿಸಿರುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ನಿಧಿಯನ್ನು ಮತಾಂತರಕ್ಕಾಗಿ ಬಳಸಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಸ್ಥೆಗಳ ಮುಖ್ಯಸ್ಥ ರಿಯಾಜ್ ಕಾಜಿ ಮಹಿಳೆಯರ ಮೇಲೆ ಇಸ್ಲಾಂ ಪಾಲಿಸುವಂತೆ ಒತ್ತಡ ಹೇರಿದ್ದನು, ಹಾಗೆಯೇ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಅವನ ವಿರುದ್ಧ ಈ ರೀತಿಯ ದೂರುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಜಿ ಈಗ ಬಂಧನದಲ್ಲಿದ್ದಾನೆ.
🚨 Foreign-Funded Conversion & Abuse Case Shocks Maharashtra
Maharashtra ATS has arrested Riyaz Kazi of Nagpur over allegations of religious conversion, molestation, and pressuring women to wear Islamic attire and follow specific customs.
⚠️ Another institutionally run… pic.twitter.com/L7xPMi3mci
— Sanatan Prabhat (@SanatanPrabhat) April 21, 2026
ಸಂಸ್ಥೆಯು ದತ್ತಿ ಆಯುಕ್ತರ ಬಳಿ ಮಾಡಿಸಿರುವ ನೋಂದಣಿ, ಆರ್ಥಿಕ ಲೆಕ್ಕಪರಿಶೋಧನೆ, ಹಾಗೆಯೇ ನಿಧಿಯ ಬಳಕೆ ಕುರಿತು ಆಳವಾದ ತನಿಖೆ ನಡೆಯುತ್ತಿದೆ.
ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿರುವ ವಕೀಲ ಸಲ್ಮಾನ್ ಅಹ್ಮದ್ ಅವರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ‘ಶಿಸ್ತು ಕ್ರಮದ ನಂತರ ಸೇಡಿನ ಭಾವನೆಯಿಂದ ಈ ದೂರನ್ನು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ. ‘ಸಂಬಂಧಪಟ್ಟ ಮಹಿಳೆಯರೇ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದರು; ಆದ್ದರಿಂದ ಅವರಿಗೆ ನೋಟಿಸ್ ನೀಡಲಾಗಿತ್ತು’, ಎಂದೂ ಅವರು ತಿಳಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ