ನ್ಯಾಯಾಲಯವು ಅರ್ಜಿಯನ್ನು ‘ಹುರುಳಿಲ್ಲದ್ದು’ ಎಂದು ತೀರ್ಮಾನಿಸಿದೆ!

ನಾಗಪುರ – ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಒದಗಿಸಲಾಗುತ್ತಿರುವ ‘ಝಡ್ ಪ್ಲಸ್-ವಿವಿಐಪಿ’ (ಅತ್ಯುನ್ನತ ದರ್ಜೆಯ ಭದ್ರತಾ ವ್ಯವಸ್ಥೆ) ಭದ್ರತೆಯ ವೆಚ್ಚವನ್ನು ಸಂಘದ ಪ.ಪೂ. ಸರಸಂಘಚಾಲಕರಾದ ಡಾ. ಮೋಹನ್‌ಜೀ ಭಾಗವತ್ ಅವರಿಂದ ವಸೂಲಿ ಮಾಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಲಲನ್ ಕಿಶೋರ್ ಸಿಂಗ್ ಅವರು ಮುಂಬಯಿ ಉಚ್ಚ ನ್ಯಾಯಾಲಯದ ನಾಗಪುರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು; ಆದರೆ ಈ ಅರ್ಜಿಯು ಯಾವುದೇ ಹುರುಳಿಲ್ಲದ್ದು ಎಂದು ಪರಿಗಣಿಸಿ ನ್ಯಾಯಾಲಯವು ಅದನ್ನು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರು ಈ ತೀರ್ಪು ನೀಡಿದ್ದಾರೆ. ಈ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಆದೇಶಗಳನ್ನು ನೀಡಲು ಸಾಕಷ್ಟು ಮಾಹಿತಿಯಿಲ್ಲ ಎಂದು ತೀರ್ಪು ನೀಡುವಾಗ ತಿಳಿಸಲಾಗಿದೆ. ಈ ಭದ್ರತೆಯ ಒಂದು ತಿಂಗಳ ವೆಚ್ಚವು ಸುಮಾರು ೪೦ ರಿಂದ ೪೫ ಲಕ್ಷ ರೂಪಾಯಿಗಳಷ್ಟಿದೆ ಎಂದು ಹೇಳಲಾಗಿದೆ.
ಅರ್ಜಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಫೆಬ್ರವರಿ ೨೭, ೨೦೨೩ ರಂದು ನೀಡಿದ್ದ ತೀರ್ಪೊಂದನ್ನು ಉಲ್ಲೇಖಿಸಲಾಗಿತ್ತು. ಆ ತೀರ್ಪಿನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಭದ್ರತೆಗೆ ಸಂಬಂಧಿಸಿದಂತೆ, ವಿಶಿಷ್ಟ ಸಂದರ್ಭಗಳಲ್ಲಿ ಭದ್ರತೆಯನ್ನು ಒದಗಿಸಿದರೂ, ಅದರ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಸ್ಥೆಯೇ ಭರಿಸುವುದು ಅಗತ್ಯವಾಗಿದೆ ಎಂದು ಹೇಳಲಾಗಿತ್ತು. ಹೀಗಿರುವಾಗ, ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯು ನೋಂದಾಯಿತವಲ್ಲದ ಸಂಸ್ಥೆಗೆ ತೆರಿಗೆದಾರರ ಹಣದಿಂದ ಅತ್ಯುನ್ನತ ಮಟ್ಟದ ಭದ್ರತೆಯನ್ನು ಒದಗಿಸುತ್ತಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.
ಅರ್ಜಿಯಲ್ಲಿದ್ದ ಇತರ ಬೇಡಿಕೆಗಳು!
೧. ತೆರಿಗೆದಾರರ ಹಣ ಪೋಲಾಗುವುದನ್ನು ತಡೆದು ಅದನ್ನು ಸರಕಾರಿ ಖಜಾನೆಗೆ ಜಮೆ ಮಾಡಬೇಕು.
೨. ಕೇಂದ್ರ ಸರಕಾರ ಮತ್ತು ಗೃಹ ಸಚಿವಾಲಯವು ಈ ಬಗ್ಗೆ ನಡೆಸಿರುವ ಪತ್ರವ್ಯವಹಾರಗಳ ಕುರಿತು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಬೇಕು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”