'ಎನ್.ಎಸ್.ಎಸ್.' ಶಿಬಿರದಲ್ಲಿ ಹಿಂದೂ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಪ್ರಕರಣ
ಪ್ರಕರಣದ ವಿಚಾರಣೆಯ ಸಮಯದಲ್ಲಿ ಪ್ರಾಧ್ಯಾಪಕರು ತಮ್ಮ ವಾದ ಮಂಡಿಸಬಹುದು! - ಹೈಕೋರ್ಟ್
(‘ಎನ್ಎಸ್ಎಸ್ ‘-ನ್ಯಾಷನಲ್ ಸರ್ವಿಸ್ ಸ್ಕೀಮ್ ಎಂದರೆ ರಾಷ್ಟ್ರೀಯ ಸೇವಾ ಯೋಜನೆ)

ರಾಯಪುರ (ಛತ್ತೀಸ್‌ಗಢ) – ಬಿಲಾಸಪುರದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ದಾಖಲಾಗಿರುವ ಎಫ್.ಐ.ಆರ್. ಮತ್ತು ಕ್ರಿಮಿನಲ್ ಕ್ರಮಗಳನ್ನು ರದ್ದುಗೊಳಿಸಲು ಛತ್ತೀಸ್‌ಗಢ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗರ್ವಾಲ್ ಅವರಿದ್ದ ಪೀಠವು ಕೆಳಹಂತದ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. “ಘಟನಾ ಸ್ಥಳದಲ್ಲಿ ಗೈರುಹಾಜರಿ ಅಥವಾ ಆಡಳಿತಾತ್ಮಕ ಪಾತ್ರದ ಕುರಿತಾದ ವಾದಗಳನ್ನು ಸಾಕ್ಷ್ಯಧಾರಗಳೊಂದಿಗೆ ವಿಚಾರಣೆಯ ಸಮಯದಲ್ಲಿ ಮಂಡಿಸಬಹುದು. ಈಗಿನ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಎಂದರೆ ಸತ್ಯಾಸತ್ಯತೆ ಮತ್ತು ಸಾಕ್ಷ್ಯಗಳ ಬಗ್ಗೆ ಮುಂಚಿತವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ ?
ಗುರು ಘಾಸಿದಾಸ್ ಕೇಂದ್ರ ವಿಶ್ವವಿದ್ಯಾಲಯದ 7 ದಿನಗಳ ‘ಎನ್.ಎಸ್.ಎಸ್.’ ಶಿಬಿರದಲ್ಲಿ ‘ಈದ್-ಉಲ್-ಫಿತರ್’ (ರಂಜಾನ್ ಈದ್) ನಿಮಿತ್ತ ಮುಸ್ಲಿಂ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಮಾಜ್ ಮಾಡಲು ತಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ವಿದ್ಯಾರ್ಥಿಗಳನ್ನೂ ಅವರ ಒಪ್ಪಿಗೆಯಿಲ್ಲದೆ ಭಾಗವಹಿಸುವಂತೆ ಒತ್ತಾಯಿಸಲಾಗಿತ್ತು. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದರು. ಈ ದೋಷಾರೋಪ ಪಟ್ಟಿಯಲ್ಲಿ ಯೋಜನಾ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಝಾ ಅವರ ಹೆಸರನ್ನೂ ಪೊಲೀಸರು ಸೇರಿಸಿದ್ದರು. ಇದನ್ನು ಝಾ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. “ಘಟನಾ ಸ್ಥಳದಲ್ಲಿ ನಾನು ಇರಲಿಲ್ಲ ಮತ್ತು ಅಲ್ಲಿ ನನ್ನ ಯಾವುದೇ ಕಾರ್ಯಕಾರಿ ಪಾತ್ರ ಇರಲಿಲ್ಲ” ಎಂದು ಅವರು ತಿಳಿಸಿದ್ದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !