
ಪ್ಯೋಂಗ್ಯಾಂಗ್ (ಉತ್ತರ ಕೊರಿಯಾ) – ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಕುರಿತು ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಉತ್ತರ ಕೊರಿಯಾ ಸಮುದ್ರದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಇದು ಈ ತಿಂಗಳಿನಲ್ಲಿ ಉತ್ತರ ಕೊರಿಯಾ ನಡೆಸಿದ ನಾಲ್ಕನೇ ಮತ್ತು ಈ ವರ್ಷದ ಏಳನೇ ಪರೀಕ್ಷೆಯಾಗಿದೆ.
೧. ದಕ್ಷಿಣ ಕೊರಿಯಾದ ‘ಬ್ಲೂ ಹೌಸ್’ (ಅಧ್ಯಕ್ಷರ ಅಧಿಕೃತ ನಿವಾಸ) ತುರ್ತು ಭದ್ರತಾ ಸಭೆಯನ್ನು ಕರೆದಿದ್ದು, ಉತ್ತರ ಕೊರಿಯಾದ ಈ ಕ್ರಮವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆ ಮತ್ತು ಪ್ರಚೋದನಾಕಾರಿ ಕ್ರಮ ಎಂದು ಹೇಳಿದೆ. ಇಂತಹ ಪ್ರಚೋದನಾಕಾರಿ ಕೃತ್ಯಗಳನ್ನು ನಿಲ್ಲಿಸುವಂತೆ ಅವರು ಉತ್ತರ ಕೊರಿಯಾಕ್ಕೆ ಕರೆ ನೀಡಿದ್ದಾರೆ.
೨. ದಕ್ಷಿಣ ಕೊರಿಯಾದ ಮಾಜಿ ಭದ್ರತಾ ಸಲಹೆಗಾರ ಕಿಮ್ ಕೀ ಜಂಗ್ ಅವರು ಮಾತನಾಡಿ, ಇದರ ಮೂಲಕ ಉತ್ತರ ಕೊರಿಯಾ ಇರಾನ್ ಗೆ ಹೋಲಿಸಿದರೆ ನಮ್ಮಲ್ಲಿ ಸ್ವಂತ ರಕ್ಷಣಾ ಸಾಮರ್ಥ್ಯವಿದೆ ಎಂದು ತೋರಿಸಲು ಬಯಸಿರಬಹುದು. ಅಲ್ಲದೆ, ಅಮೆರಿಕ ಮತ್ತು ದಕ್ಷಿಣ ಕೊರಿಯಾದೊಂದಿಗೆ ಸಂವಾದ ನಡೆಸುವ ಮೊದಲು ಶಕ್ತಿ ಪ್ರದರ್ಶನದ ಮೂಲಕ ಒತ್ತಡ ಹೇರುವ ಪ್ರಯತ್ನವೂ ಇದಾಗಿರಬಹುದು, ಎಂದು ತಿಳಿಸಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !