ಪೊಲೀಸರ ಕಾಲರ್ ಹಿಡಿದು ತಳ್ಳಾಟ ನಡೆಸಿದ ಆರೋಪ

ಭಂಡಾರ – ಇಲ್ಲಿನ ಲಖನಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಾಲೆಭಾಟಾ ಗ್ರಾಮದಲ್ಲಿ ಗೋಸಾಗಾಣಿಕೆಯನ್ನು ತಡೆಯಲು ಹೋದ ಪೊಲೀಸರ ಮೇಲೆ ಗೋಸಾಗಾಣಿಕೆದಾರರು ದಾಳಿ ನಡೆಸಿದ್ದಾರೆ. ಅವರು ನೇರವಾಗಿ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ತಳ್ಳಾಟ ನಡೆಸಿದ್ದಾರೆ. ಲಖನಿಯ ಪೊಲೀಸ್ ನಿರೀಕ್ಷಕ ಸುಭಾಷ್ ಬಾರ್ಸೆ ಅವರು, “ಕಾಲರ್ ಹಿಡಿದಿರುವುದು ಅಥವಾ ತಳ್ಳಾಟ ನಡೆದಿಲ್ಲ; ಆದರೆ ಪೊಲೀಸರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಗೋಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ೧೫ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.
೧. ಸಾಲೆಭಾಟಾ ಗ್ರಾಮದ ಕೃಷಿ ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಕಟ್ಟಿಹಾಕಲಾಗಿದ್ದು, ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ‘ಗೋರಕ್ಷಾ ಹಿಂದೂ ದಳ’ ಮತ್ತು ‘ಬಜರಂಗ ದಳ’ದ ಕಾರ್ಯಕರ್ತರಿಗೆ ಸಿಕ್ಕಿತು. ಅವರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. (ಯಾವ ಮಾಹಿತಿ ಗೋರಕ್ಷಕರಿಗೆ ಸಿಗುವುದೋ, ಅದು ಎಲ್ಲಾ ವ್ಯವಸ್ಥೆಯನ್ನು ಕೈಯಲ್ಲಿ ಹೊಂದಿರುವ ಪೊಲೀಸರಿಗೆ ಏಕೆ ಸಿಗುವುದಿಲ್ಲ? – ಸಂಪಾದಕರು)
೨. ಪೊಲೀಸ್ ಸಿಬ್ಬಂದಿ ಮತ್ತು ಹಿಂದುತ್ವನಿಷ್ಠ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದಾಗ ಗೋಸಾಗಾಣಿಕೆದಾರರು ಆಕ್ರಮಣಕಾರಿಗಳಾದರು.
೩. ಸಾಗಾಣಿಕೆದಾರರಲ್ಲಿ ಒಬ್ಬನು ಪೊಲೀಸರೊಂದಿಗೆ ತಳ್ಳಾಟ ನಡೆಸಿದರೆ, ಇನ್ನೊಬ್ಬನು ಕೈಯಲ್ಲಿ ಲಾಠಿ ಹಿಡಿದು ಗೋವುಗಳಿದ್ದ ವಾಹನವನ್ನು ಗೋಶಾಲೆಗೆ ಕೊಂಡೊಯ್ಯದಂತೆ ತಡೆದನು. ಪೊಲೀಸರನ್ನು ರಸ್ತೆಯಲ್ಲೇ ತಡೆದು ಬೆದರಿಕೆ ಹಾಕಿದರು. ಈ ಘಟನೆಯು ವಿಡಿಯೋ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಪೊಲೀಸರ ಮೇಲೆ ಕೈ ಎತ್ತಿದ ಸಾಗಾಣಿಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಜರಂಗ ದಳವು ಒತ್ತಾಯಿಸಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !