
ಬೆಂಗಳೂರು – ನಟ ಪ್ರಕಾಶ್ ರಾಜ್ ಅವರು ರಾಮಾಯಣದ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಿದ್ದಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
🚨 Case Filed Against Prakash Raj Over Ramayana Remarks
A criminal complaint has been lodged after actor Prakash Raj’s alleged offensive remarks on the Ramayana sparked outrage.
Advocate @SachdevaAmita approached the Delhi Police Cyber Cell, stating the comments were deliberate… pic.twitter.com/9UUApziMmF
— Sanatan Prabhat (@SanatanPrabhat) April 18, 2026
ಪ್ರಕಾಶ್ ರಾಜ್ ಹೇಳಿದ್ದೇನು?
ವೇದಿಕೆಯೊಂದರಲ್ಲಿ ಮಾತನಾಡುತ್ತಾ ಪ್ರಕಾಶ್ ರಾಜ್ ಅವರು, ‘ರಾಮ, ಲಕ್ಷ್ಮಣ ಮತ್ತು ಸೀತೆ ದಕ್ಷಿಣ ಭಾರತಕ್ಕೆ ಬಂದಾಗ, ಲಕ್ಷ್ಮಣನಿಗೆ ಹಸಿವಾಗುತ್ತದೆ. ಅಲ್ಲಿರುವ ಹಣ್ಣಿನ ತೋಟಕ್ಕೆ ಹೋಗಿ ‘ಹಣ್ಣುಗಳನ್ನು ತಿನ್ನೋಣ’ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣುಗಳನ್ನು ತಿನ್ನುತ್ತಾರೆ. ಆಗ ಅಲ್ಲಿಗೆ ಬಂದ ಶೂರ್ಪಣಖಿ ತನ್ನ ಸಹೋದರ ರಾವಣನಿಗೆ, ‘ಯಾರೋ ಹಣ್ಣುಗಳನ್ನು ತಿನ್ನುತ್ತಿದ್ದಾರೆ’ ಎಂದು ಹೇಳುತ್ತಾಳೆ. ಅದಕ್ಕೆ ರಾವಣ, ‘ಅವರಿಗೆ ಹಸಿವಾಗಿರಬಹುದು, ತಿನ್ನಲಿ’ ಎನ್ನುತ್ತಾನೆ. ಮುಂದೆ ರಾವಣ ಹಣ ಕೇಳುತ್ತಾನೆ; ಆದರೆ ರಾಮ ‘ನನ್ನ ಬಳಿ ಹಣವಿಲ್ಲ’ ಎಂದು ಹೇಳುತ್ತಾನೆ. ಆಗ ರಾವಣ, ‘ನಾನು ೨೦% ಶೇಕಡಾ ರಿಯಾಯಿತಿ ನೀಡುತ್ತೇನೆ’ ಎನ್ನುತ್ತಾನೆ. ಹಣವೇ ಇಲ್ಲ ಎಂದ ಮೇಲೆ ರಿಯಾಯಿತಿ ನೀಡಿ ಏನು ಉಪಯೋಗ? ಅದೇ ರೀತಿ ನಮ್ಮ ಮೇಲೆ ಹಿಂದಿ ಹೇರಬೇಡಿ, ಇಲ್ಲಿಗೆ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಗೋಮಾಂಸ ಉತ್ಸವವನ್ನು (ಬೀಫ್ ಫೆಸ್ಟ್) ಆಚರಿಸುತ್ತೇವೆ’ ಎಂದು ಹೇಳಿದ್ದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ