
ನವ ದೆಹಲಿ – ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಮೀಸಲಾತಿ, ಹಾಗೂ ಮತಕ್ಷೇತ್ರಗಳ ಪುನರ್ವಿಂಗಡಣೆಗೆ ಸಂಬಂಧಿಸಿದ ‘ನಾರಿಶಕ್ತಿ ವಂದನ’ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿದೆ. ಏಪ್ರಿಲ್ 16 ರಂದು, ಮೊದಲ ದಿನ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಅದರ ಮೇಲೆ ಚರ್ಚೆ ಪ್ರಾರಂಭವಾಯಿತು. ಏಪ್ರಿಲ್ 17 ರಂದು ಈ ಬಗ್ಗೆ ಮತದಾನ ನಡೆಯಲಿದೆ. ಈ ತಿದ್ದುಪಡಿ ಮಸೂದೆಯಲ್ಲಿ ಲೋಕಸಭೆಯ ಸಂಸದರ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸುವ ಪ್ರಸ್ತಾಪವಿದೆ.
ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಮಾತನಾಡಿ, “ದೇಶದಲ್ಲಿ ಯಾವಾಗಲೆಲ್ಲಾ ಚುನಾವಣೆಗಳು ಬಂದಿವೆಯೋ, ಆಗ ಯಾರೆಲ್ಲಾ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದ್ದಾರೋ, ಅವರಿಗೆ ಭಾರಿ ಹಿನ್ನಡೆಯಾಗಿದೆ. ಅವರಿಗೆ ಎಂದಿಗೂ ಕ್ಷಮೆ ಸಿಕ್ಕಿಲ್ಲ. ಯಾರಿಗೆ ಇದರಲ್ಲಿ ರಾಜಕೀಯದ ವಾಸನೆ ಬರುತ್ತದೆಯೋ, ಅವರು ತಮ್ಮ ಸ್ವಂತ ಪರಿಣಾಮಗಳ ಬಗ್ಗೆ ಯೋಚಿಸಲಿ. ಇದು ಕೇವಲ ಲಾಭದ ವಿಷಯವಲ್ಲ; ಇದರಿಂದ ಆಗುವ ಹಾನಿಯನ್ನು ಅವರು ತಪ್ಪಿಸಿಕೊಳ್ಳಲಿ. ಆದ್ದರಿಂದ, ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ಈ ದೇಶದ ಮಹಿಳೆಯರು ನಮ್ಮ ದೋಷಪೂರಿತ ಉದ್ದೇಶಗಳನ್ನು ಎಂದಿಗೂ ಕ್ಷಮಿಸುವುದಿಲ್ಲ,” ಎಂದು ಹೇಳಿದರು.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!